2040 ವೇಳೆಗೆ ಚಂದ್ರನಲ್ಲಿಗೆ ಗಗನಯಾತ್ರಿ ಕಳಿಸಲು ಭಾರತದ ಯೋಜನೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತವು 2040 ವೇಳೆಗೆ ಚಂದ್ರನಲ್ಲಿಗೆ ಗಗನಯಾತ್ರಿಯನ್ನು ಕಳಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ಹೇಳಿದೆ. ದೇಶವು 2035 ವೇಳೆ ಬಾಹ್ಯಾಕಾಶ ಕೇಂದ್ರವನ್ನು ಹೊಂದುವ ಯೋಜನೆ ಹೊಂದಬೇಕೆಂದು ಪ್ರಧಾನಿ ಈಗಾಗಲೇ ಬಾಹ್ಯಾಕಾಶ ಇಲಾಖೆಗೆ ಸೂಚನೆ ನೀಡಿದ್ದಾರೆ.
ಭಾರತ ಈಗಾಗಲೇ ಚಂದ್ರನ ದಕ್ಷಿಣ ಧ್ರುವಕ್ಕೆ ತನ್ನ ಚಂದ್ರಯಾನ ಮಿಷನ್ ಮೂಲಕ ಕಾಲಿಟ್ಟ ಜಗತ್ತಿನ ಮೊದಲ ದೇಶ ಎಬ ಹೆಗ್ಗಳಿಕೆಗೆ ಪಾತ್ರವಾಗಿದೆ.
“ಭಾರತೀಯ ಅಂತರಿಕ್ಷಾ ನಿಲ್ದಾಣವನ್ನು 2035ರೊಳಗೆ ಸ್ಥಾಪಿಸುವ ಹಾಗೂ ಚಂದ್ರನಲ್ಲಿಗೆ 2040 ವೇಳೆಗೆ ಮೊದಲ ಗಗನಯಾತ್ರಿಯನ್ನು ದೇಶದಿಂದ ಕಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಪ್ರಧಾನಿ ಸೂಚನೆ ನೀಡಿದ್ದಾರೆ,” ಎಂದು ಸರ್ಕಾರ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.
“ಈ ಉದ್ದೇಶವನ್ನು ಈಡೇರಿಸಲು ಬಾಹ್ಯಾಕಾಶ ಇಲಾಖೆ ರೂಪುರೇಷೆ ಸಿದ್ಧಪಡಿಸ;ಲಿದೆ,” ಎಂದು ಹೇಳಿಕೆ ತಿಳಿಸಿದೆ.
ಮಂಗಳ ಮತ್ತು ಶುಕ್ರ ಗ್ರಹಗಳ ಕುರಿತೂ ಹೆಚ್ಚಿನ ಅಧ್ಯಯನ ನಡೆಸುವಂತೆ ವಿಜ್ಞಾನಿಗಳಿಗೆ ಪ್ರಧಾನಿ ಸೂಚಿಸಿದ್ದಾರೆ.