ಭಾರತ-ಬಾಂಗ್ಲಾದೇಶ ಪ್ರಥಮ ಟೆಸ್ಟ್ | ಹಸನ್ ಮಹ್ಮೂದ್ ಬೌಲಿಂಗ್ಗೆ ತತ್ತರಿಸಿದ ಭಾರತದ ಬ್ಯಾಟರ್ಗಳು
PC:x/@CricinfoHindi
ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ನಲ್ಲಿ ಬಾಂಗ್ಲಾ ದೇಶದ ಬೌಲರ್ ಹಸನ್ ಮಹ್ಮೂದ್ ಬೌಲಿಂಗ್ಗೆ ಭಾರತೀಯ ಬ್ಯಾಟರ್ಗಳು ತತ್ತರಿಸಿದ್ದಾರೆ.
ಟಾಸ್ ಗೆದ್ದ ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡರು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಯಲ್ಪಟ್ಟ ಉತ್ತಮ ಆರಂಭ ಪಡೆಯಲಿಲ್ಲ. ಬಾಂಗ್ಲಾದೇಶದ ಮಧ್ಯಮ ವೇಗದ ಬೌಲರ್ ಹಸನ್ ಮುಹ್ಮೂದ್ ತಮ್ಮ ನಿಖರ ದಾಳಿಯಿಂದ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ಮೇಲುಗೈ ಒದಗಿಸಿ ಕೊಟ್ಟರು. ಭಾರತದ ಸ್ಕೋರ್ 34 ಆಗುವ ಹೊತ್ತಿಗೇ ಭಾರತದ ತಾರಾ ಬ್ಯಾಟರ್ ಗಳಾದ ನಾಯಕ ರೋಹಿತ್ ಶರ್ಮ (6), ಶುಭಮನ್ ಗಿಲ್ (0) ಹಾಗೂ ವಿರಾಟ್ ಕೊಹ್ಲಿ (6) ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲದೆ ಪೆವಿಲಿಯನ್ ಗೆ ಮರಳಿದರು. ಈ ಮೂರೂ ವಿಕೆಟ್ ಗಳನ್ನು ಹಸನ್ ಮಹ್ಮೂದ್ ಅವರೇ ಕಬಳಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮಾತ್ರ ನೆಲಕಚ್ಚಿ ಆಡಿ, ತಾಳ್ಮೆಯ ಅರ್ಧ ಶತಕ (56) ಗಳಿಸಿದರು. ಆದರೆ, ಅವರು ಸಾಹಿದ್ ರಾಣಾ ಬೌಲಿಂಗ್ ನಲ್ಲಿ ಶಾದ್ಮನ್ ಇಸ್ಲಾಂ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಸದ್ಯ ಕ್ರೀಸಿನಲ್ಲಿರುವ ರವೀಂದ್ರ ಜಡೇಜಾ (ಔಟಾಗದೆ 21) ಹಾಗೂ ರವಿಚಂದ್ರನ್ ಅಶ್ವಿನ್ (40) ಇದ್ದಾರೆ. ಭಾರತ ತಂಡ 213 ರನ್ಗೆ 6 ವಿಕೆಟ್ ಕಳೆದುಕೊಂಡಿದೆ.