ಪಪುವಾ ನ್ಯೂ ಗಿನಿಯಾದಲ್ಲಿ ಭೂಕುಸಿತ | ಭಾರತದಿಂದ 19 ಟನ್ ಪರಿಹಾರ ಸಾಮಗ್ರಿ ರವಾನೆ
(Photo: IANS)
ಹೊಸದಿಲ್ಲಿ: ಭಾರೀ ಭೂಕುಸಿತವಾಗಿರುವ ಪಪುವಾ ನ್ಯೂ ಗಿನಿಯಾದ ಎಂಗಾ ಪ್ರಾಂತ್ಯಕ್ಕೆ ಭಾರತವು ಗುರುವಾರ 19 ಟನ್ಗಳಷ್ಟು ಮಾನವೀಯ ಸಹಾಯ ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ.
ಕಳೆದ ತಿಂಗಳು ಭಾರತವು ಪಪುವಾ ನ್ಯೂ ಗಿನಿಯಾಗೆ 1 ಮಿಲಿಯನ್ ಡಾಲರ್ ಸಹಾಯ ಒದಗಿಸುವುದಾಗಿ ತಿಳಿಸಿತ್ತು.
ದುರಂತದಲ್ಲಿ 2,000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆಂದು ಮಾಧ್ಯಮ ವರದಿಗಳು ತಿಳಿಸಿವೆ. 19 ಟನ್ಗಳಷ್ಟು ಪರಿಹಾರ ಸಾಮಗ್ರಿ ಹೊತ್ತಿದ್ದ ವಿಮಾನ ಇಂದು ಪಪುವಾ ನ್ಯೂ ಗಿನಿಯಾಗೆ ತೆರಳಿದೆ.
ಪಪುವಾ ನ್ಯೂ ಗಿನಿಯಾ ದೇಶವು ಫೋರಂ ಫಾರ್ ಇಂಡಿಯಾ-ಪೆಸಿಫಿಕ್ ಐಲ್ಯಾಂಡ್ಸ್ ಕೊ-ಆಪರೇಷನ್ ಸದಸ್ಯನಾಗಿದ್ದು ಈ ಮೂಲಕ ಭಾರತವು ಪೆಸಿಫಿಕ್ ದ್ವೀಪ ಪ್ರಾಂತ್ಯದಲ್ಲಿ ಪರಸ್ಪರ ಸಹಕಾರಕ್ಕಾಗಿ ಶ್ರಮಿಸುತ್ತಿದೆ
Next Story