ಮಾಲ್ದೀವ್ಸ್ ರಾಯಭಾರಿಗೆ ಸಮನ್ಸ್ ನೀಡಿದ ಭಾರತದ ವಿದೇಶಾಂಗ ಸಚಿವಾಲಯ
Photo credit: ANI
ಹೊಸದಿಲ್ಲಿ: ಮಾಲ್ದೀವ್ಸ್ನ ಮೂವರು ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಿಂದನಾರ್ಹ ಮಾತುಗಳನ್ನು ಆಡಿದ ಹಿನ್ನೆಲೆಯಲ್ಲಿ ಮಾಲ್ದೀವ್ಸ್ ರಾಯಭಾರಿಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಯಭಾರಿ ಇಬ್ರಾಹಿಂ ಶಾಹಿಬ್ ಅವರು ವಿದೇಶಾಂಗ ಸಚಿವಾಲಯದ ಕಚೇರಿಗೆ ತೆರಳಿದ್ದಾರೆ.
ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಪೋಸ್ಟ್ ಮಾಡಿದ ಹಲವು ಫೋಟೋಗಳು ಹಾಗೂ ಟ್ವೀಟ್ಗಳಿಗೆ ಪ್ರತಿಯಾಗಿ ಇಬ್ಬರು ಮಾಲ್ದೀವ್ಸ್ ಸಚಿವರು ನಿಂದನಾತ್ಮಕ ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೀಡಾಗಿತ್ತು.
ಈ ಘಟನೆಯ ಬೆನ್ನಲ್ಲೇ ಹಲವು ಭಾರತೀಯರು ತಮ್ಮ ಮಾಲ್ದೀವ್ಸ್ ಪ್ರವಾಸ ರದ್ದುಗೊಳಿಸಿದ ಬೆಳವಣಿಗೆಯೂ ನಡೆದಿದೆ. ಈ ನಡುವೆ ಮಾಲ್ದೀವ್ಸ್ ಸರ್ಕಾರ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ತನ್ನ ಸಚಿವರಾದ ಮರ್ಯಮ್ ಶಿಯುನಾ, ಮಲ್ಯಾ ಶರೀಫ್ ಮತ್ತು ಮಹಜೂಮ್ ಮಜೀದ್ ಅವರನ್ನು ಅಮಾನತುಗೊಳಿಸಿದೆ.
Next Story