ಪಾಕ್ನಿಂದ ವಲಸೆ ಬಂದ 18 ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ
Photo: Bloomberg
ಹೊಸದಿಲ್ಲಿ, ಮಾ.17: ಅಹ್ಮದಾಬಾದ್ನಲ್ಲಿ ರವಿವಾರ ಆಯೋಜಿಸಲಾಗಿದ್ದ ಶಿಬಿರದಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ 18 ಮಂದಿ ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲಾಯಿತು. ಗುಜರಾತ್ನ ಗೃಹ ಖಾತೆಯ ಸಹಾಯಕ ಸಚಿವ ಹರ್ಷ ಸಾಂಘವಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಸಚಿವ ಸಾಂಘ್ವಿ ಅವರು 18 ಮಂದಿಗೆ ಪೌರತ್ವ ನೀಡಿದರು ಹಾಗೂ ನವಭಾರತದ ಕನಸನ್ನು ಸಾಕಾರಗೊಳಿಸಲು ಒಗ್ಗೂಡಿ ಶ್ರಮಿಸುವಂತೆ ಅವರಿಗೆ ಕರೆ ನೀಡಿದರು.
ದೇಶದ ಅಭಿವೃದ್ಧಿಯ ಪಯಣದಲ್ಲಿ ಪಾಲ್ಗೊಳ್ಳಲು ನೀವೆಲ್ಲರೂ ದೃಢ ನಿರ್ಧಾರವನ್ನು ಮಾಡಿರುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದವರು ಹೇಳಿದ್ದಾರೆ. ಭಾರತೀಯ ಪೌರತ್ವವನ್ನು ಪಡೆದವರೆಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬದ್ಧವಾಗಿವೆಯೆಂದವರು ಹೇಳಿದರು.
Next Story