ಚೀನಾ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸೋತ ಭಾರತದ ಟೇಬಲ್ ಟೆನಿಸ್ ತಂಡ
PC : PTI
ಪ್ಯಾರಿಸ್ : ಇದೇ ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿರುವ ಭಾರತದ ಪುರುಷರ ಟೇಬಲ್ ಟೆನಿಸ್ ತಂಡವು ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ 0-3 ಅಂತರದಿಂದ ಸೋಲುಂಡಿದೆ.
ಚೀನಾ ತಂಡವು ಡಬಲ್ಸ್ ಪಂದ್ಯದಲ್ಲಿ ನೇರ ಗೇಮ್ ಗಳಿಂದ ಜಯ ಸಾಧಿಸುವ ಮೂಲಕ ಭರ್ಜರಿ ಆರಂಭ ಪಡೆಯಿತು. ಮಾ ಲಾಂಗ್ ಹಾಗೂ ವಾಂಗ್ ಚೂಕಿನ್ ಅವರು ಹರ್ಮೀತ್ ದೇಸಾಯಿ ಹಾಗೂ ಮಾನವ್ ಥಕ್ಕರ್ರನ್ನು 11-2, 11-3, 11-7 ಅಂತರದಿಂದ ಮಣಿಸಿದರು.
ಆ ನಂತರ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಹಿರಿಯ ಆಟಗಾರ ಶರತ್ ಕಮಲ್ ಅವರು ಫ್ಯಾನ್ ಝೆಂಗ್ಡಾಂಗ್ ಎದುರು ಮೊದಲ ಗೇಮ್ ಅನ್ನು 11-9ರಿಂದ ಗೆದ್ದುಕೊಂಡು ಸಮಾಧಾನಕರ ಆರಂಭ ಪಡೆದರು. ಆದರೆ ಪ್ಯಾರಿಸ್ ಗೇಮ್ಸ್ ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಝೆನ್ಡಾಂಗ್ ಮುಂದಿನ ಮೂರು ಗೇಮ್ಗಳನ್ನು 11-7, 11-7, 11-5 ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಮಾನವ್ ಥಕ್ಕರ್ ಅವರು ವಾಂಗ್ ಚುಕ್ವಿನ್ ಎದುರು 9-11, 6-11, 9-11 ಅಂತರದಿಂದ ಸೋತಿದ್ದಾರೆ.