ತುರ್ತುಪರಿಸ್ಥಿತಿ ಸಮಯದಿಂದ ಭಾರತೀಯರು ಜನಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡಿಲ್ಲ: ನಾರಾಯಣ ಮೂರ್ತಿ
ನಾರಾಯಣ ಮೂರ್ತಿ | PTI
ಹೊಸದಿಲ್ಲಿ: ಭಾರತದ ಏರುತ್ತಿರುವ ಜನಸಂಖ್ಯೆ ದೊಡ್ಡ ಸವಾಲಾಗಿದೆ ಹಾಗೂ ತುರ್ತು ಪರಿಸ್ಥಿತಿ ಸಮಯದಿಂದ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ದೇಶ ಹೆಚ್ಚು ಗಮನಹರಿಸಿಲ್ಲ ಎಂದು ಇನ್ಫೋಸಿಸ್ ಸಹಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.
“ಭಾರತವು ಜನಸಂಖ್ಯೆ, ತಲಾ ವ್ಯಕ್ತಿಗೆ ಭೂಮಿ ಲಭ್ಯತೆ ಮತ್ತು ಆರೋಗ್ಯಸೇವೆ ಸೌಲಭ್ಯಗಳ ಕುರಿತಂತೆ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ,” ಎಂದು ಪ್ರಯಾಗರಾಜ್ನ ಮೋತಿಲಾಲ್ ನೆಹರೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಅವರು ಹೇಳಿದರು.
“ತುರ್ತುಪರಿಸ್ಥಿತಿ ಸಮಯದಿಂದ ನಾವು ಭಾರತೀಯರು ಜನಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡಿಲ್ಲ. ಇದು ನಮ್ಮ ದೇಶದ ಸುಸ್ಥಿರತೆಗೆ ಅಪಾಯವೊಡ್ಡುತ್ತದೆ. ಭಾರತಕ್ಕೆ ಹೋಲಿಸಿದಾಗ ಅಮೆರಿಕಾ, ಬ್ರೆಝಿಲ್ ಮತ್ತು ಚೀನಾದಲ್ಲಿ ತಲಾ ವ್ಯಕ್ತಿಗೆ ಭೂ ಲಭ್ಯತೆ ಅಧಿಕವಾಗಿದೆ,” ಎಂದು ಅವರು ಹೇಳಿದರು.
Next Story