ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಇಂಡಿಗೋ ಪೈಲಟ್ ಸಾವು
ಸಾಂದರ್ಭಿಕ ಚಿತ್ರ.| Photo: PTI
ನಾಗಪುರ (ಮಹಾರಾಷ್ಟ್ರ): ಇಂಡಿಗೋ ಏರ್ಲೈನ್ಸ್ ನ ನಾಗಪುರ-ಪುಣೆ ಮಾರ್ಗದ ಓರ್ವ ಪೈಲಟ್ ಗುರುವಾರ ನಾಗಪುರ ವಿಮಾನ ನಿಲ್ದಾಣದ ಬೋರ್ಡಿಂಗ್ ಗೇಟ್ ನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೇಲ್ನೋಟಕ್ಕೆ ಅವರು ‘‘ದಿಢೀರ್ ಹೃದಯ ಸ್ತಂಭನ’’ದಿಂದಾಗಿ ಮೃತಪಟ್ಟಿರುವಂತೆ ಕಾಣುತ್ತಿದೆ ಎಂದು ಕಿಮ್ಸ್-ಕಿಂಗ್ಸ್ವೇ ಆಸ್ಪತ್ರೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಬೋರ್ಡಿಂಗ್ ಗೇಟ್ ನಲ್ಲಿ ಕುಸಿದು ಬಿದ್ದ ಪೈಲಟ್ ರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
“ನಮ್ಮ ಪೈಲಟ್ ಒಬ್ಬರು ನಾಗಪುರದಲ್ಲಿ ನಿಧನರಾಗಿದ್ದಾರೆ. ನಾಗಪುರ ವಿಮಾನ ನಿಲ್ದಾಣದಲ್ಲಿ ಅವರು ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ಒಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಕುಟುಂಬ ಸದಸ್ಯರಿಗಾಗಿ ನಾವು ಪ್ರಾರ್ಥಿಸುತ್ತೇವೆ’’ ಎಂದು ಏರ್ ಲೈನ್ ನ ಹೇಳಿಕೆಯೊಂದು ತಿಳಿಸಿದೆ.
ಅವರ ಹಾರಿಸಬೇಕಾಗಿದ್ದ ವಿಮಾನವು 14 ನಿಮಿಷಗಳ ವಿಳಂಬದ ಬಳಿಕ ಮಧ್ಯಾಹ್ನ 1:24ಕ್ಕೆ ಹೊರಟಿದೆ.
Next Story