ಗಣರಾಜ್ಯೋತ್ಸವ | ಕರ್ತವ್ಯ ಪಥದಲ್ಲಿ ಪಥ ಸಂಚಲನಕ್ಕೆ ಸಾಕ್ಷಿಯಾದ ಇಂಡೋನೇಶ್ಯ ಅಧ್ಯಕ್ಷ

Photo credit: X/@prabowo
ಹೊಸದಿಲ್ಲಿ: ಭಾರತದ 76ನೇ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಪಥ ಸಂಚಲನಕ್ಕೆ ಇಂಡೋನೇಶ್ಯ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಸಾಕ್ಷಿಯಾದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಸುಬಿಯಾಂತೊ, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ವಿದೇಶಿ ರಾಜತಾಂತ್ರಿಕರು ಹಾಗೂ ಇತರ ಗಣ್ಯರೊಂದಿಗೆ ಸೇನಾ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಿದರು.
ಇಂಡೋನೇಶ್ಯದ ಮಾಜಿ ರಕ್ಷಣಾ ಸಚಿವರೂ ಆಗಿರುವ ಸುಬಿಯಾಂತೊ, ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಇಂಡೊನೇಶ್ಯದ ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಇಂಡೋನೇಶ್ಯದ ಪ್ರಥಮ ಅಧ್ಯಕ್ಷ ಸುಕರ್ನೊ ಅವರು 1950ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು.
ಈ ಪಥ ಸಂಚಲನದಲ್ಲಿ ಇಂಡೋನೇಶ್ಯದ 352 ಸದಸ್ಯರ ಪಥ ಸಂಚಲನ ತಂಡ ಹಾಗೂ ವಾದ್ಯ ತಂಡವೂ ಪಾಲ್ಗೊಂಡಿತ್ತು. ವಿದೇಶವೊಂದರ ರಾಷ್ಟ್ರೀಯ ಸಮಾರಂಭದಲ್ಲಿ ಇಂಡೋನೇಶ್ಯದ ತಂಡ ಭಾಗವಹಿಸಿದ್ದು ಇದೇ ಮೊದಲಾಗಿದೆ.
Next Story