ಭಾರತೀಯ ವಲಸಿಗರಿಗೆ ಕೈಕೋಳ ಹಾಕಿ ಗಡೀಪಾರು ಮಾಡಿರುವುದು ದೇಶಕ್ಕೆ ಅವಮಾನ: ಶಶಿ ತರೂರ್ ವಾಗ್ದಾಳಿ
Photo | PTI
ಹೊಸದಿಲ್ಲಿ: ಅಕ್ರಮ ಭಾರತೀಯ ವಲಸಿಗರಿಗೆ ಕೈಕೋಳ ಹಾಕಿ ಗಡೀಪಾರು ಮಾಡಿರುವುದು ದೇಶಕ್ಕೆ ಅವಮಾನ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ವಾಗ್ದಾಳಿ ನಡೆಸಿದರು.
ಗುರುವಾರ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, “ಹೀಗೆ ಗಡೀಪಾರು ಮಾಡಿರುವುದನ್ನು ನಾವು ಪ್ರತಿಭಟಿಸುತ್ತಿದ್ದೇವೆ. ಅವರ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಎಲ್ಲ ಹಕ್ಕು ಅವರಿಗಿದೆ ಹಾಗೂ ಅವರೇನಾದರೂ ಭಾರತೀಯರು ಎಂದು ಸಾಬೀತಾದರೆ ಅವರನ್ನು ನಾವು ಸ್ವೀಕರಿಸುವುದು ಅನಿವಾರ್ಯವಾಗಿದೆ. ಆದರೆ, ಹೀಗೆ ದಿಢೀರನೆ ಸೇನಾ ವಿಮಾನದಲ್ಲಿ ಅವರಿಗೆ ಕೈಕೋಳ ತೊಡಿಸಿ ಗಡೀಪಾರು ಮಾಡುವುದು ಭಾರತಕ್ಕೆ ಅವಮಾನವಾಗಿದೆ. ಇದು ಭಾರತೀಯರ ಘನತೆಗಾಗಿರುವ ಅವಮಾನವಾಗಿದೆ” ಎಂದು ಟೀಕಿಸಿದರು.
Next Story