ಇಸ್ರೊದಿಂದ ಇನ್ಸಾಟ್ 3ಡಿಎಸ್ ಉಪಗ್ರಹ ಯಶಸ್ವಿ ಉಡಾವಣೆ
Photo : PTI
ಶ್ರೀಹರಿಕೋಟ: ಹವಾಮಾನ ಮಾಹಿತಿ ರವಾನಿಸುವ 3ನೇ ತಲೆಮಾರಿನ ಉಪಗ್ರಹವನ್ನು ಹೊತ್ತು ಆಕಾಶಕ್ಕೆ ಹಾರಿದ ಜಿಎಸ್ಎಲ್ವಿ ರಾಕೆಟ್ ಅದನ್ನು ನಿಗದಿತ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
51.7 ಮೀಟರ್ ಎತ್ತರದ ಜಿಎಸ್ಎಲ್ವಿ-ಎಫ್14 ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ 2ನೇ ಉಡ್ಡಯನ ವೇದಿಕೆಯಿಂದ ಶನಿವಾರ ಆಕಾಶಕ್ಕೆ ಹಾರಿತು.
ಇನ್ಸಾಟ್ 3ಡಿಎಸ್ ಉಪಗ್ರಹ ಭೂಮಿಯ ಮೇಲ್ಮೈ ಹಾಗೂ ಸಾಗರ ಅವಲೋಕನಗಳ ಅಧ್ಯಯನವನ್ನು ವೃದ್ಧಿಗೊಳಿಸುವ ಗುರಿಯನ್ನು ಹೊಂದಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ 2ನೇ ಉಡ್ಡಯನ ವೇದಿಕೆಯಿಂದ ಶನಿವಾರ ನಭಕ್ಕೆ ಚಿಮ್ಮಿದ 51.7 ಮೀಟರ್ ಎತ್ತರದ ಜಿಎಸ್ಎಲ್ವಿ–ಎಫ್14 ಮೇಲೇರುತ್ತಿದ್ದಂತೆ ವಿಜ್ಞಾನಿಗಳ ಹರ್ಷಕ್ಕೆ ಪಾರವೇ ಇರಲಿಲ್ಲ.
ಶ್ರೀಹರಿಕೋಟಾ: ಹವಾಮಾನ ಮಾಹಿತಿ ರವಾನಿಸುವ 3ನೇ ತಲೆಮಾರಿನ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿದ ಜಿಎಸ್ಎಲ್ವಿ ರಾಕೆಟ್, ಅದನ್ನು ನಿಗದಿತ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
Next Story