ಜಮ್ಮುಕಾಶ್ಮೀರ: ಗುಂಡು ಹಾರಿಸಿಕೊಂಡು ಯೋಧನ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ | PTI
ಜಮ್ಮು,ಅ.5: ಜಮ್ಮುಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಶನಿವಾರ ಸೇನೆಯ ಯೋಧರೋರ್ವರು ತನ್ನ ಸರ್ವಿಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಉತ್ತರಾಖಂಡ ಮೂಲದ ಸಿಪಾಯಿ ಮನೀಷ ಬಿಷ್ಟ್ ಅವರು ಬಾಲಕೋಟ್ ವಿಭಾಗದ ಬೆಹ್ರೋತೆ ಪೋಸ್ಟ್ನಲ್ಲಿ ಸೆಂಟ್ರಿ ಕರ್ತವ್ಯದಲ್ಲಿದ್ದಾಗ ಸ್ವಯಂ ಗುಂಡು ಹಾರಿಸಿಕೊಂಡಿದ್ದಾರೆ.
ಯೋಧನ ಆತ್ಮಹತ್ಯೆಗೆ ನಿಖರ ಕಾರಣವನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Next Story