ಜಾರ್ಖಂಡ್: ಅಪರಿಚಿತನಿಂದ ಎನ್ಟಿಪಿಸಿ ಅಧಿಕಾರಿಯ ಗುಂಡಿಕ್ಕಿ ಹತ್ಯೆ

ಕುಮಾರ್ ಗೌರವ್ | PC : NDTV
ರಾಂಚಿ: ಜಾರ್ಖಂಡ್ನಲ್ಲಿ ಅಪರಿಚಿತ ಬಂದೂಕುಧಾರಿಯೊಬ್ಬ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ)ದ ಅಧಿಕಾರಿಯೊಬ್ಬರು ಶನಿವಾರ ಬೆಳಗ್ಗೆ ನಿಧನರಾದರು. ರಾಜ್ಯದ ಹಝಾರಿಬಾಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಹತ್ಯೆಯಾದ ಅಧಿಕಾರಿಯನ್ನು 42 ವರ್ಷ ವಯಸ್ಸಿನ ಕುಮಾರ್ ಗೌರವ್ ಎಂದು ಗುರುತಿಸಲಾಗಿದೆ. ಆತ ಎನ್ಟಿಪಿಸಿಯ ಕೆರೆದಾರಿ ಕಲ್ಲಿದ್ದಲು ಗಣಿ ಯೋಜನೆಯ ಮಹಾಪ್ರಬಂಧಕ (ರವಾನೆ)ರಾಗಿ ನಿಯೋಜಿತರಾಗಿದ್ದರು.
ಕಾಟ್ಕಾಮ್ದಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ಫತಹಾ ಚೌಕದ ಸಮೀಪ ಗೌರವ್ ಅವರಿಗೆ ಅಪರಿಚಿತ ವ್ಯಕ್ತಿ ಗುಂಡಿಕ್ಕಿದ್ದಾಏನೆಂದು ಹಝಾರಿಬಾಗ್ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ಅರವಿಂದ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯ ಸ್ಥಳಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಗುಂಡೇಟಿನಿಂದ ಗಂಭೀರ ಗಾಯಗೊಂಡ ಗೌರವ್ ಅವರನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಆಗಲೇ ಸಾವನ್ನಪ್ಪಿದ್ದಾರೆಂದು ವೈದ್ಯರು ಘೋಷಿಸಿದರು.
ಪ್ರಕರಣದ ತನಿಖೆ ಮುಂದುವರಿದಿದ್ದು, ಕ್ರಿಮಿನಲ್ಗಳ ಬಂಧನಕ್ಕಾಗಿ ಶೋಧಕಾರ್ಯಾಚರಣೆಯನ್ನು ನಡೆಯುತ್ತಿದೆಯೆಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಗೌರವ್ ಅವರು ಮೂಲತಃ ಬಿಹಾರದ ನಲಂದಾ ನಿವಾಸಿಯೆಂದು ತಿಳಿದುಬಂದಿದೆ.