ಜಾರ್ಖಂಡ್:ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ; ಮೂವರು ಮಕ್ಕಳು ಸೇರಿ ಐವರ ಸಜೀವ ದಹನ

ಗಢವಾ: ಇಲ್ಲಿಯ ಪಟಾಕಿ ಅಂಗಡಿಯೊಂದರಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಐವರು ಸಜೀವ ದಹನಗೊಂಡಿದ್ದಾರೆ.
ನಗರದ ಗೋದರಮಾನಾ ಬಝಾರ್‌ನಲ್ಲಿ ಈ ದುರಂತ ಸಂಭವಿಸಿದೆ.
ಅಂಗಡಿಯಲ್ಲಿನ ಕಟ್ಟಿಗೆಯ ವೇದಿಕೆಯ ಮೇಲೆ ಮಾರಾಟಕ್ಕಾಗಿ ಪಟಾಕಿಗಳನ್ನು ಇರಿಸಿದ್ದಾಗ ಅಪರಾಹ್ನ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ತೀವ್ರ ಸುಟ್ಟ ಗಾಯಗಳಾಗಿದ್ದ ಐವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು,ಕಾರಣವಿನ್ನಷ್ಟೇ ಗೊತ್ತಾಗಬೇಕಿದೆ ಎಂದು ಪೋಲಿಸರು ತಿಳಿಸಿದರು.
ರಾಜ್ಯಪಾಲ ಸಂತೋಷ ಕುಮಾರ ಗಂಗ್ವಾರ್ ಮತ್ತು ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಘಟನೆಯಲ್ಲಿ ಜೀವಹಾನಿಗೆ ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದು,ಮೃತರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸಿದ್ದಾರೆ.
Next Story