ಜಾರ್ಖಂಡ್: ಹುಲ್ಲಿನ ಬಣವೆಗೆ ಬೆಂಕಿ; ನಾಲ್ವರು ಮಕ್ಕಳು ಮೃತ್ಯು

ಸಾಂದರ್ಭಿಕ ಚಿತ್ರ | PC : freepik.com
ಚಾಯಿಬಾಸಾ: ಮನೆ ಸಮೀಪದ ಹುಲ್ಲಿನ ಬಣವೆಗೆ ಬೆಂಕಿ ಹತ್ತಿಕೊಂಡ ಪರಿಣಾಮ ಅಲ್ಲಿ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಸಾವನ್ನಪ್ಪಿದ ಘಟನೆ ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಚಾಯಿಬಾಸಾದ ಜಗನ್ನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಿಟಿಲಿಪಿ ಗ್ರಾಮದಲ್ಲಿ ಸುಮಾರು 11 ಗಂಟೆಗೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ವಿಸ್ತೃತ ತನಿಖೆಗೆ ತಂಡವೊಂದನ್ನು ಕಳುಹಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅಶುತೋಷ್ ಶೇಖರ್ ತಿಳಿಸಿದ್ದಾರೆ.
ಬೆಂಕಿ ಅವಘಡ ಸಂಭವಿಸುವ ಸಂದರ್ಭ ಮಕ್ಕಳು ಹುಲ್ಲಿನ ಬಣವೆಯ ಸಮೀಪ ಆಟವಾಡುತ್ತಿದ್ದರು. ಬೆಂಕಿ ಅವಘಡ ಸಂಭವಿಸಲು ನಿಖರವಾದ ಕಾರಣ ಏನೆಂದು ಇದುವರೆಗೆ ತಿಳಿದು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
Next Story