ಜಾತಿ ಗಣತಿಗೆ ಜಾರ್ಖಂಡ್ ಮುಖ್ಯಮಂತ್ರಿ ಸಮ್ಮತಿ
ಚಂಪಯಿ ಸೊರೇನ್ | Photo: PTI
ರಾಂಚಿ : ಜಾರ್ಖಂಡ್ ನಲ್ಲಿ ಜಾತಿ ಗಣತಿಗೆ ಮುಖ್ಯಮಂತ್ರಿ ಚಂಪಯಿ ಸೊರೇನ್ ಅವರು ಸಮ್ಮತಿ ನೀಡಿದ್ದಾರೆ.
ಬಿಹಾರದಲ್ಲಿ ಜಾತಿ ಗಣತಿ ನಡೆದ ಬಳಿಕ ಜಾರ್ಖಂಡ್ ನಲ್ಲಿ ಕೂಡ ಹಲವು ಪಕ್ಷಗಳು ಜಾತಿ ಗಣತಿ ನಡೆಸುವಂತೆ ಆಗ್ರಹಿಸಿವೆ. ಇದರೊಂದಿಗೆ ಬಿಹಾರ್ ಹಾಗೂ ಆಂಧ್ರಪ್ರದೇಶದ ಬಳಿಕ ದೇಶದಲ್ಲಿ ಜಾತಿ ಗಣತಿ ನಡೆಸುವ ಮೂರನೇ ರಾಜ್ಯ ಜಾರ್ಖಂಡ್ ಆಗಲಿದೆ.
ಕರಡು ಸಿದ್ಧಪಡಿಸುವಂತೆ ಹಾಗೂ ಅದನ್ನು ಅಂಗೀಕಾರಕ್ಕೆ ಸಂಪುಟದ ಮುಂದೆ ಇರಿಸುವಂತೆ ಚಂಪಯಿ ಸೊರೇನ್ ಅವರು ಸಿಬ್ಬಂದಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಯೋಜನೆಯಂತೆ ಎಲ್ಲವೂ ನಡೆದರೆ, ಲೋಕಸಭೆ ಚುನಾವಣೆ ಬಳಿಕ ಜಾತಿ ಗಣತಿ ಆರಂಭವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Next Story