ಅವ್ಯವಹಾರ ಪ್ರಕರಣ: ಜಾರ್ಖಂಡ್ ಸಿಎಂಗೆ ಆರನೇ ಬಾರಿ ನೋಟಿಸ್
Photo: twitter
ರಾಂಚಿ: ಹಣ ಅವ್ಯವಹಾರ ಮತ್ತು ಭೂವ್ಯವಹಾರ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಆರನೇ ನೋಟಿಸ್ ಹೊರಡಿಸಿದ್ದು, ರಾಂಚಿ ಕಚೇರಿಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಸೊರೇನ್ ಮಂಗಳವಾರ ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಉದ್ಘಾಟನೆಗೆ ದುಮ್ಕಾಗೆ ತೆರಳುವ ಪ್ರವಾಸ ನಿದಿಯಾಗಿದೆ. ಸಮನ್ಸ್ ನೀಡಿದ ಬಳಿಕವೂ ದುಮ್ಕಾ ಪ್ರವಾಸವನ್ನು ಸೊರೇನ್ ರದ್ದುಪಡಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.
ಕಾನೂನು ಜಾರಿ ನಿರ್ದೇಶನಾಲಯ ಈ ಮುನ್ನ ಆಗಸ್ಟ್ 14, ಆಗಸ್ಟ್ 24, ಸೆಪ್ಟೆಂಬರ್ 9, ಸೆಪ್ಟೆಂಬರ್ 23 ಮತ್ತು ಅಕ್ಟೋಬರ್ 4ರಂದು ಈ ಪ್ರಕರಣದಲ್ಲಿ ಸಮನ್ಸ್ ನೀಡಿತ್ತು. ಆದರೆ ಇದ್ಯಾವುದಕ್ಕೂ ಅವರು ಹಾಜರಾಗಿರಲಿಲ್ಲ. ಇದರ ಬದಲು ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದರು. ಆದರೆ ಈ ಸಮನ್ಸ್ಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ ಇದನ್ನು ಹೈಕೋರ್ಟ್ ವಜಾಗೊಳಿಸಿತ್ತು.
Next Story