ಜಾರ್ಖಂಡ್: ರಾಮನವಮಿ ಮೆರವಣಿಗೆ ವೇಳೆ ಕೋಮು ಹಿಂಸಾಚಾರ

PC : PTI
ರಾಂಚಿ: ಜಾರ್ಖಂಡ್ ನ ಹಝಾರಿಬಾಗ್ ನಲ್ಲಿ ರಾಮನವಮಿ ಆಚರಣೆಯ ಭಾಗವಾಗಿ ಮಂಗಳವಾರ ನಡೆದ ಧಾರ್ಮಿಕ ಮೆರವಣಿಗೆ ಸಂದರ್ಭ ಕೋಮು ಹಿಂಸಾಚಾರ ನಡೆದಿದೆ.
ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ಸಂದರ್ಭ ಜಾಮಾ ಮಸೀದಿ ಚೌಕದಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ಕಲ್ಲು ತೂರಾಟ ನಡೆಯಿತು. ಇದು ಘರ್ಷಣೆಗೆ ಕಾರಣವಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.
ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಈ ಪ್ರದೇಶದಲ್ಲಿ ಬುಧವಾರ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಹಝಾರಿಬಾಗ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪರಮೇಶ್ವರ್ ಕಂಮ್ಟಿ ತಿಳಿಸಿದ್ದಾರೆ.
Next Story