ಜಾರ್ಖಂಡ್: ಒಬಿಸಿ ಪಟ್ಟಿಯಲ್ಲಿ ತೃತೀಯ ಲಿಂಗಿಗಳ ಸೇರ್ಪಡೆ
ಸಾಂದರ್ಭಿಕ ಚಿತ್ರ. | Photo: NDTV
ರಾಂಚಿ: ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಪಡೆಯಲು ಸಾಧ್ಯವಾಗುವಂತೆ ತೃತೀಯ ಲಿಂಗಿಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಜಾರ್ಖಂಡ್ ರಾಜ್ಯ ಸಂಪುಟ ಬುಧವಾರ ಹೇಳಿದೆ.
ತೃತೀಯ ಲಿಂಗಿ ಸಮುದಾಯದ ಸದಸ್ಯರಿಗೆ ರಾಜ್ಯ ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪಿಂಚಣಿಯಾಗಿ ಪ್ರತಿ ತಿಂಗಳು 1 ಸಾವಿರ ರೂಪಾಯಿ ನೀಡಲಾಗುವುದು ಎಂದು ಅದು ತಿಳಿಸಿದೆ. ಸಂಪುಟದಲ್ಲಿ ಬುಧವಾರ ತೆಗೆದುಕೊಂಡ ನಿರ್ಧಾರದಂತೆ ಮೀಸಲಾತಿಯಿಲ್ಲದ ತೃತೀಯ ಲಿಂಗಿಗಳನ್ನು ಮಾತ್ರ ಇತರ ಹಿಂದುಳಿದ ವರ್ಗಗಳಲ್ಲಿ ಸೇರಿಸಲಾಗುವುದು ಎಂದು ಸಂಪುಟ ಕಾರ್ಯದರ್ಶಿ ವಂದನಾ ದಾದೇಲ್ ಹೇಳಿದ್ದಾರೆ.
‘‘ಈ ಮೀಸಲಾತಿ ಈಗಾಗಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಹಾಗೂ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸೇರಿದ (ತೃತೀಯ ಲಿಂಗಿ ಸಮುದಾಯದ ಸದಸ್ಯರು) ತೃತೀಯ ಲಿಂಗಿಗಳಿಗೆ ಅನ್ವಯವಾಗುವುದಿಲ್ಲ’’ ಎಂದು ದಾದೇಲ್ ತಿಳಿಸಿದ್ದಾರೆ.
Next Story