ನಾಲ್ಕು ವರ್ಷಗಳ ಬಳಿಕ ಜೆ ಎನ್ ಯು ನಲ್ಲಿ ವಿದ್ಯಾರ್ಥಿ ಒಕ್ಕೂಟದ ಚುನಾವಣೆ
Photo: thehindu.com
ಹೊಸದಿಲ್ಲಿ : ವಿದ್ಯಾರ್ಥಿ ಒಕ್ಕೂಟದ ಚುನಾವಣೆಯನ್ನು ಮಾರ್ಚ್ 22ರಂದು ನಡೆಸಲಾಗುವುದು ಹಾಗೂ ಮಾರ್ಚ್ 24ರಂದು ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆ ಎನ್ ಯು) ಸೋಮವಾರ ತಿಳಿಸಿದೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟ (ಜೆ ಎನ್ ಯು ಎಸ್ ಯು) ಚುನಾವಣೆ ಕೊನೆಯ ಬಾರಿಗೆ 2019ರಲ್ಲಿ ನಡೆದಿತ್ತು.
ಜೆ ಎನ್ ಯು ಬಿಡುಗಡೆ ಮಾಡಿದ ಚುನಾವಣಾ ಸಮಿತಿ ವೇಳಾ ಪಟ್ಟಿ ಪ್ರಕಾರ ತಾತ್ಕಾಲಿಕ ಮತದಾರರ ಪಟ್ಟಿ ಸೋಮವಾರ ಪ್ರದರ್ಶಿತವಾಗಲಿದೆ. ಮಂಗಳವಾರದ ವರೆಗೆ ಬದಲಾವಣೆಗೆ ಮುಕ್ತ ಅವಕಾಶ ಇರಲಿದೆ.
ವಿದ್ಯಾರ್ಥಿಗಳು ಮಾರ್ಚ್ 14ರಿಂದ ನಾಮಪತ್ರ ಸಲ್ಲಿಸಬಹುದು. ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಮಾರ್ಚ್ 16ರಂದು ಪ್ರದರ್ಶಿಸಲಾಗುವುದು ಎಂದು ಅಧಿಕೃತ ನೋಟಸ್ ಹೇಳಿದೆ.
Next Story