ಮಹಾರಾಷ್ಟ್ರ | ಜಾಮೀನು ಮಂಜೂರು ಮಾಡಲು 5 ಲಕ್ಷ ರೂ.ಗೆ ಬೇಡಿಕೆ ಆರೋಪ; ನ್ಯಾಯಾಧೀಶನ ಬಂಧನ
ಸಾಂದರ್ಭಿಕ ಚಿತ್ರ
ಸತಾರಾ: ಆರೋಪಿಯೊಬ್ಬನಿಗೆ ಜಾಮೀನು ಮಂಜೂರು ಮಾಡಲು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧನಂಜಯ್ ಹಾಗೂ ಇನ್ನಿತರ ಮೂವರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ಇಲಾಖೆ ಈ ಕ್ರಮ ಕೈಗೊಂಡಿದ್ದು, ಸತಾರಾದ ಹೋಟೆಲ್ವೊಂದರಲ್ಲಿ ಆರೋಪಿಗಳು ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಈ ಘಟನೆ ನ್ಯಾಯಾಲಯದ ಆವರಣದೊಳಗೇ ನಡೆದಿದೆ ಎಂದು ವರದಿಯಾಗಿದೆ.
Next Story