ಹರ್ಯಾಣ: ಶಾಲಾ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಕನ್ವರಿಯಾಗಳು
Photo credit: tribuneindia.com
ಹಿಸಾರ್: ಕನ್ವರಿಯಾಗಳು ಶಾಲಾ ಬಸ್ ಒಂದರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಂಗಳವಾರ ಫತೇಬಾದ್ ನ ರತಿಯಾ ಪ್ರದೇಶದಲ್ಲಿ ನಡೆದಿದೆ. ಮೂಲಗಳ ಪ್ರಕಾರ, ಈ ಘಟನೆ ನಡೆದಾಗ ಹಲವಾರು ಶಾಲಾ ಮಕ್ಕಳು ಬಸ್ ನಲ್ಲಿದ್ದರು ಎಂದು ಹೇಳಲಾಗಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಲ್ಲು ತೂರಾಟ ನಡೆದ ನಂತರ ರಸ್ತೆಯೊಂದನ್ನು ಬಂದ್ ಮಾಡಿದ ಶಾಲಾ ವಾಹನದ ಚಾಲಕನು, ಕನ್ವರಿಯಾಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ರತಿಯಾ ಪೊಲೀಸ್ ಠಾಣೆಯ ಠಾಣಾಧಿಕಾರಿ ರಂಜೀತ್ ಸಿಂಗ್, ಇಬ್ಬರು ಆರೋಪಿಗಳಾದ ವಿಕ್ಕಿ ಹಾಗೂ ಸಂಜು ಸೇರಿದಂತೆ ಇನ್ನಿತರ 30-40 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಕ್ಕಿ ಹಾಗೂ ಸಂಜು ಇಬ್ಬರೂ ಬಜರಂಗ ದಳಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ, ಈ ಘಟನೆಯಲ್ಲಿ ನಾವಿಬ್ಬರೂ ಅಮಾಯಕರು ಎಂದು ವಿಕ್ಕಿ ಹಾಗೂ ಸಂಜು ಹೇಳಿಕೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಶಾಲಾ ಬಸ್ ಕನ್ವರಿಯಾ ಒಬ್ಬರಿಗೆ ಢಿಕ್ಕಿ ಹೊಡೆದಿದ್ದರಿಂದ ಈ ಘರ್ಷಣೆ ನಡೆಯಿತು ಎಂದು ಹೇಳಲಾಗಿದೆ.
#Kanwariyas pelted stones at a school bus in #Haryana's Fatehabad. According to reports, the incident occurred when the school bus touched the Kanwariyas, prompting them to target the bus.#ViralVideo #StonePelting #Fatehabad pic.twitter.com/rERtOZWDns
— TIMES NOW (@TimesNow) July 30, 2024