ದಿಲ್ಲಿ ವಿಧಾನಸಭೆಯಲ್ಲಿ ಕೇಜ್ರಿವಾಲ್ಗೆ 40ನೇ ಸಂಖ್ಯೆಯ ಆಸನ
ಅರವಿಂದ ಕೇಜ್ರಿವಾಲ್ | PTI
ಹೊಸದಿಲ್ಲಿ : ಆಮ್ ಆದ್ಮಿ ಪಕ್ಷದ ವರಿಷ್ಠ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದಿಲ್ಲಿ ವಿಧಾನಸಭೆಯಲ್ಲಿ 41ನೇ ಸಂಖ್ಯೆಯ ಆಸನವನ್ನು ನೀಡಲಾಗಿದೆ. ಮುಖ್ಯಮಂತ್ರಿಯ ಕುರ್ಚಿಯಿಂದ ಈ 40 ಸಂಖ್ಯೆಯ ಆಸನವು ಹಲವಾರು ಹೆಜ್ಜೆಗಳಷ್ಟು ಅಂತರದಲ್ಲಿದೆ.
ಕೇಜ್ರಿವಾಲ್ ಅವರ ಉತ್ತರಾಧಿಕಾರಿಯಾದ ಅತಿಶಿ ಅವರಿಗೆ ಮುಖ್ಯಮಂತ್ರಿಗಳ 1ನೇ ಸಂಖ್ಯೆಯ ಆಸನವನ್ನು ನೀಡಲಾಗಿದೆ. ಕೇಜ್ರಿವಾಲ್ ಅವರ ಆಪ್ತ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಕೇಜ್ರಿವಾಲ್ ಅವರ ಪಕ್ಕದಲ್ಲೇ, 40ನೇ ಸಂಖ್ಯೆಯ ಆಸನ ನೀಡಲಾಗಿದೆ.ಸಿ ಸೋಡಿಯಾ ಅವರು ಕೇಜ್ರಿವಾಲ್ ನೇತೃತ್ವದ ಸರಕಾರದಲ್ಲಿ ಸುಮಾರು 10 ವರ್ಷಗಳ ಕಾಲ ಡಿಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅತಿಶಿ ಅವರು, ತನ್ನ ಪೂರ್ವಾಧಿಕಾರಿ ಕೇಜ್ರಿವಾಲ್ ಅವರು ಸಿಎಂ ಕಚೇರಿಯಲ್ಲಿ ಕೂರುತ್ತಿದ್ದ ಆಸನವನ್ನು ಖಾಲಿಯರಿಸಿದ್ದು, ಅದರ ಪಕ್ಕದಲ್ಲೇ ಇನ್ನೊಂದು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಅತಿಶಿ ಅವರ ಈ ನಡೆಯು, ಮುಖ್ಯಮಂತ್ರಿ ಹುದ್ದೆಗೆ ಮಾಡಿದ ‘ಘೋರ ಅವಮಾನ’ವೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಟೀಕಿಸಿವೆ.
ಮದ್ಯ ನೀತಿ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಕೇಜ್ರಿವಾಲ್ ದಿಲ್ಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಿಲ್ಲಿಯ ಜನತೆಯಿಂದ ತಾನು ಪ್ರಾಮಾಣಿಕ ಎಂಬ ಪ್ರಮಾಣಪತ್ರವನ್ನು ಪಡೆದ ಆನಂತರವಷ್ಟೇ ಮುಖ್ಯಮಂತ್ರಿ ಹುದ್ದೆಗೆ ಮರಳುವುದಾಗಿ ಅವರು ಹೇಳಿದ್ದಾರೆ.