ಮೋದಿ-ಪೋಪ್ ಭೇಟಿ ಕುರಿತ ತನ್ನ ವಿವಾದಾತ್ಮಕ ಪೋಸ್ಟ್ಗೆ ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್
Photo:X/@narendramodi
ತಿರುವನಂತಪುರಂ: ಇಟಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ-7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೋಪ್ ಫ್ರಾನ್ಸಿಸ್ ಭೇಟಿ ಕುರಿತು ತಾನು ಮಾಡಿದ್ದ ಟ್ವೀಟ್ಗೆ ಕೇರಳ ಕಾಂಗ್ರೆಸ್ ಘಟಕವು ಕ್ರಿಶ್ಚಿಯನ್ ಸಮುದಾಯದ ಕ್ಷಮೆ ಯಾಚಿಸಿದೆ. ಇದೇ ವೇಳೆ, ತಮ್ಮನ್ನು ತಾವು ದೇವರು ಎಂದು ಕರೆದುಕೊಂಡು, ದೇಶದ ನಂಬಿಕೆಗೆ ಧಕ್ಕೆ ತಂದಿರುವ ಪ್ರಧಾನಿ ನರೇಂದ್ರ ಮೋದಿಯನ್ನು ವ್ಯಂಗ್ಯವಾಡಲು ತಾನು ಹಿಂಜರಿಯುವುದಿಲ್ಲ ಎಂದೂ ಹೇಳಿದೆ.
ಇದರ ಬೆನ್ನಿಗೇ, ತನ್ನ ಹಿಂದಿನ ಪೋಸ್ಟ್ ಅನ್ನು ಅಳಿಸಿರುವ ಕಾಂಗ್ರೆಸ್, ಮತ್ತೊಂದು ವಿವರಣೆಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಈ ಪೋಸ್ಟ್ನಲ್ಲಿ ಕ್ರಿಶ್ಚಿಯನ್ ಸಮುದಾಯದ ಬೇಷರತ್ ಕ್ಷಮೆ ಯಾಚಿಸಿರುವ ಕಾಂಗ್ರೆಸ್, ಒಂದು ವೇಳೆ ನಮ್ಮ ಈ ಹಿಂದಿನ ಪೋಸ್ಟ್ನಿಂದ ಕ್ರಿಶ್ಚಿಯನ್ ಸಮುದಾಯದ ನಂಬಿಕೆಗೇನಾದರೂ ಘಾಸಿಯಾಗಿದ್ದರೆ, ಅವರಿಗೆ ಭಾವನಾತ್ಮಕ ಅಥವಾ ಮಾನಸಿಕ ಕ್ಷೋಭೆಯನ್ನುಂಟು ಮಾಡಿದ್ದರೆ ಕ್ಷಮೆ ಯಾಚಿಸುವುದಾಗಿ ಹೇಳಿದೆ.
ಇದೇ ವೇಳೆ "ಮುಂದಿನ ಬಾರಿ ಒಳಿತಾಗಲಿ" ಎಂದು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್ ಅವರನ್ನು ಕಾಂಗ್ರೆಸ್ ಗೇಲಿ ಮಾಡಿದೆ.
ഒരു മതത്തെയും മതപുരോഹിതന്മാരെയും ആരാധനാമൂർത്തികളെയും അപമാനിക്കുകയും അവഹേളിക്കുകയും ചെയ്യുന്നത് ഇന്ത്യൻ നാഷണൽ കോൺഗ്രസിന്റെ പാരമ്പര്യമല്ലെന്ന് ഈ നാട്ടിലെ ജനങ്ങൾക്ക് മുഴുവനും അറിയാം. എല്ലാ മതങ്ങളെയും വിശ്വാസങ്ങളെയും ചേർത്ത് പിടിച്ച് സൗഹാർദ്ദപരമായ അന്തരീക്ഷത്തിൽ ജനങ്ങളെ മുന്നോട്ടു… pic.twitter.com/Jg7HBh9BMw
— Congress Kerala (@INCKerala) June 16, 2024