ಕಚೇರಿ ವೇಳೆಯಲ್ಲಿ ಸಿಬ್ಬಂದಿಗಳಿಂದ ಸಾಮಾಜಿಕ ಜಾಲತಾಣ ಬಳಕೆಗೆ ಕೇರಳ ಹೈಕೋರ್ಟ್ ಬ್ರೇಕ್
ಕೇರಳ ಹೈಕೋರ್ಟ್ | PTI
ಕೊಚ್ಚಿ : ಕೇರಳ ಉಚ್ಛ ನ್ಯಾಯಾಲಯವು ತನ್ನ ಸಿಬ್ಬಂದಿಗಳು ಕೆಲಸದ ವೇಳೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದರ ಮತ್ತು ಆನ್ಲೈನ್ ಗೇಮ್ಗಳನ್ನು ಆಡುವುದರ ವಿರುದ್ಧ ಗದಾ ಪ್ರಹಾರವನ್ನು ಆರಂಭಿಸಿದೆ.
ಕಚೇರಿ ಅವಧಿಯಲ್ಲಿ ಮತ್ತು ಭೋಜನ ವಿರಾಮದಲ್ಲಿ ಆನ್ಲೈನ್ ಗೇಮ್ಗಳಲ್ಲಿ ತೊಡಗಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸಿಬ್ಬಂದಿಗಳಿಗೆ ಈ ವಾರ ಹೊರಡಿಸಲಾಗಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕಚೇರಿ ಉದ್ದೇಶಗಳಿಗೆ ಹೊರತುಪಡಿಸಿ ಕೆಲಸದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದು, ಚಲನಚಿತ್ರ ವೀಕ್ಷಣೆ ಅಥವಾ ಆನ್ಲೈನ್ ಟ್ರೇಡಿಂಗ್ನಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಆದರೆ ಭೋಜನ ವಿರಾಮದಲ್ಲಿ ಈ ನಿಷೇಧವು ಅನ್ವಯಿಸುವುದಿಲ್ಲ.
ಆದೇಶದ ಉಲ್ಲಂಘನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆಯನ್ನೂ ಸಿಬ್ಬಂದಿಗಳಿಗೆ ನೀಡಲಾಗಿದೆ. ತಮ್ಮ ನಿಯಂತ್ರಣದಲ್ಲಿರುವ ಸಿಬ್ಬಂದಿಗಳ ಮೇಲೆ ನಿಗಾಯಿರಿಸುವಂತೆ ಮತ್ತು ಅವರು ಈ ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ.