ಪಠ್ಯದಿಂದ NCERT ಕೈಬಿಟ್ಟ ಅಧ್ಯಾಯಗಳನ್ನು ಸೇರಿಸಿ ಪೂರಕ ಪಠ್ಯ ಹೊರತರುತ್ತಿರುವ ಕೇರಳ ಸರ್ಕಾರ
ಸಾಂದರ್ಭಿಕ ಚಿತ್ರ (PTI)
ತಿರುವನಂತಪುರಂ: ಮಹಾತ್ಮ ಗಾಂಧಿ ಅವರ ಹತ್ಯೆ, 2002 ಗುಜರಾತ್ ಗಲಭೆಗಳು ಹಾಗೂ ತುರ್ತುಪರಿಸ್ಥಿತಿ ಕುರಿತು ಮಾಹಿತಿ ಹೊಂದಿದ್ದ ಅಧ್ಯಾಯಗಳನ್ನು 11 ಮತ್ತು 12ನೇ ತರಗತಿ ಪಠ್ಯಪುಸ್ತಕಗಳಿಂದ ಕಳೆದ ವರ್ಷ ಎನ್ಸಿಇಆರ್ಟಿ ಕೈಬಿಟ್ಟಿದ್ದರೆ ಈ ಕೈಬಿಡಲಾದ ಅಧ್ಯಾಯಗಳನ್ನು ಸೇರಿಸಿ ಹೊಸ ಪೂರಕ ಪಠ್ಯಪುಸ್ತಕಗಳನ್ನು ವಿತರಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಪೂರಕ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮವನ್ನು ತಿರುವನಂತಪುರಂನ ಕಾಟನ್ ಹಿಲ್ ಸ್ಕೂಲಿನಲ್ಲಿ ಆಗಸ್ಟ್ 23ರಂದು ಉದ್ಘಾಟಿಸಲಿದ್ಧಾರೆ ಎಂದು ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಹೇಳಿದ್ದಾರೆ.
ರಾಜ್ಯ ಸರ್ಕಾರವು ರಾಷ್ಟ್ರೀಯ ಮತ್ತು ಶೈಕ್ಷಣಿಕ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿ ಈ ಪೂರಕ ಪಠ್ಯವನ್ನು ಸಿದ್ಧಪಡಿಸಿದೆ ಎಂದು ಶಿವನ್ಕುಟ್ಟಿ ಹೇಳಿದ್ದಾರೆ.
ಪೂರಕ ಪಠ್ಯಗಳು ಕೇವಲ ಓದಲು ಮಾತ್ರವಲ್ಲ, ಬದಲು ಪರೀಕ್ಷೆಗಾಗಿಯೂ ಇವುಗಳನ್ನು ಅಧ್ಯಯನ ನಡೆಸಬೇಕಿದೆ ಎಂದು ಸಚಿವರು ಹೇಳಿದರು. “ಕೇರಳದಲ್ಲಿ 1 ರಿಂದ 10ನೇ ತರಗತಿ ತನಕದ ಪಠ್ಯಗಳನ್ನು ರಾಜ್ಯದಲ್ಲಿಯೇ ಸಿದ್ಧಪಡಿಸಲಾಗುತ್ತದೆ ಆದ್ದರಿಂದ 6ರಿಂದ 10ನೇ ತರಗತಿ ತನಕದ ಪಠ್ಯಗಳಲ್ಲಿ ಎನ್ಸಿಇಆರ್ಟಿ ಮಾಡಿದ ಬದಲಾವಣೆಗಳು ಪರಿಣಾಮ ಬೀರದು ಆದರೆ ರಾಜ್ಯದಲ್ಲಿ 11 ಮತ್ತು 12ನೇ ತರಗತಿಗಳಿಗೆ ಎನ್ಸಿಇಆರ್ಟಿ ಪಠ್ಯವನ್ನೇ ಕಲಿಸಲಾಗುತ್ತದೆ.