ನಟ ಮುಷ್ತಾಕ್ ಖಾನ್ರನ್ನು ಅಪಹರಿಸಿದ್ದ ಅಪಹರಣಕಾರರಿಂದ ಶಕ್ತಿ ಕಪೂರ್ರನ್ನೂ ಅಪಹರಿಸುವ ಸಂಚು ನಡೆದಿತ್ತು: ಉತ್ತರ ಪ್ರದೇಶ ಪೊಲೀಸರು
ನಟ ಮುಷ್ತಾಕ್ ಖಾನ್ , ಶಕ್ತಿ ಕಪೂರ್ | PC : timesofindia.
ಬಿಜ್ನೋರ್/ಮೀರತ್: ದಿಲ್ಲಿ ವಿಮಾನ ನಿಲ್ದಾಣದಿಂದ ನಟ ಮುಷ್ತಾಕ್ ಮುಹಮ್ಮದ್ ಖಾನ್ರನ್ನು ಅಪಹರಿಸಿ, ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಒತ್ತೆ ಇಟ್ಟುಕೊಂಡು, ಒತ್ತೆ ಹಣಕ್ಕೆ ಆಗ್ರಹಿಸಿದ್ದ ಆರೋಪದ ಮೇಲೆ ನಾಲ್ವರ ಗುಂಪೊಂದನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತ ದುಷ್ಕರ್ಮಿಗಳು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ಸೋಗಿನಲ್ಲಿ ಹಿರಿಯ ನಟ ಶಕ್ತಿ ಕಪೂರ್ ಅವರನ್ನೂ ಅಪಹರಿಸುವ ಸಂಚು ನಡೆಸಿದ್ದರು ಎಂದು ಹೇಳಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕೆ ಹಿರಿಯ ನಟ ಶಕ್ತಿ ಕಪೂರ್ ಅವರಿಗೆ ಈ ಗುಂಪು 5 ಲಕ್ಷ ರೂ. ಪಾವತಿಸುವ ಆಹ್ವಾನ ನೀಡಿತ್ತು. ಆದರೆ, ಶಕ್ತಿ ಕಪೂರ್ ಅವರು ಅಧಿಕ ಮುಂಗಡ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಆ ಮಾತುಕತೆ ಮುರಿದು ಬಿದ್ದಿತ್ತು ಎಂಬ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಶನಿವಾರ ಈ ಕುರಿತು ವಿವರಗಳನ್ನು ಹಂಚಿಕೊಂಡ ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಝಾ, ಡಿಸೆಂಬರ್ 9ರಂದು ಮುಷ್ತಾಕ್ ಖಾನ್ ಅವರ ಕಾರ್ಯಕ್ರಮ ವ್ಯವಸ್ಥಾಪಕ ಶಿವಂ ಯಾದವ್ ಈ ಸಂಬಂಧ ದೂರು ದಾಖಲಿಸಿದ್ದರು ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸರ್ತಾಕ್ ಚೌಧರಿ, ಸಬಿಯುದ್ದೀನ್, ಅಝೀಂ ಹಾಗೂ ಶಶಾಂಕ್ ಎಂದು ಗುರುತಿಸಲಾಗಿದ್ದು, ಪೊಲೀಸರು ಅವರಿಂದ 1.04 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾ