ಕೋಟಾ: ವಿದ್ಯಾರ್ಥಿಗಳ ಮುಂದುವರಿದ ಸರಣಿ ಆತ್ಮಹತ್ಯೆ
ಬಿಟೆಕ್ ವಿದ್ಯಾರ್ಥಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕೋಟಾ: ರಾಜಸ್ತಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯಾ ಸರಣಿ ಮುಂದುವರಿದಿದ್ದು, ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬ ಪಿಜಿ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತೆಯ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. 27 ವರ್ಷ ವಯಸ್ಸಿನ ನೂರ್ ಮೊಹಮ್ಮದ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಗುರುವಾರ ರಾತ್ರಿ ವಿಗ್ಯಾನ್ನಗರ ಪ್ರದೇಶದಲ್ಲಿರುವ ಪೇಯಿಂಗ್ ಗೆಸ್ಟ್ ನಿಲಯದ ಕೊಠಡಿಯೊಂದರಲ್ಲಿ ಆತ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಬಳಿ ಡೆತ್ ನೋಟ್ ಇರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಕೋಟಾದಲ್ಲಿ ಎರಡು ವಾರಗಳಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಐಐಟಿ,ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ಉನ್ನತ ವೃತ್ತಿಪರ ಶಿಕ್ಷಣ ಕ್ಷೇತ್ರಗಳಿಗೆ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೋಚಿಂಗ್ ಸಂಸ್ಥೆಗಳಿಗೆ ಕೋಟಾ ಹೆಸರುವಾಸಿಯಾಗಿದೆ.
ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ನಿವಾಸಿಯಾದ ಮುಹಮ್ಮದ್ ಅವರು ಚೆನ್ನೈನ ಎಸ್.ಆರ್.ಎಂ. ವಿವಿಯಲ್ಲಿ ಬಿಟೆಕ್ ಪದವಿ ವಿದ್ಯಾರ್ಥಿಯಾಗಿದ್ದಾರು. ಅವರು ಬಿಟೆಕ್ ಪದವಿ ಪ್ರವೇಶ ಪರೀಕ್ಷೆ ಬರೆಯಲು, ಕೋಟಾದ ಕೋಚಿಂಗ್ ಸಂಸ್ಥೆಗಳಿಂದ 2016 ರಿಂದ 2019ರವರೆಗೆ ತರಬೇತಿ ಪಡೆದಿದ್ದರು. ಚೆನ್ನೈನ ಎಸ್.ಆರ್.ಎಂ. ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದ ಬಳಿಕ ಅವರು ಕೋಟಾದ ಪಿಜಿಯಲ್ಲಿ ಉಳಿದುಕೊಂಡೇ ಆನ್ ಲೈನ್ ಮೂಲಕ ತರಗತಿಗಳಿಗೆ ಹಾಜರಾಗುತ್ತಿದ್ದರು.
ಮುಹಮ್ಮದ್ ಅವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆಯೆಂದು ಪೊಲೀಸರು ಶಂಕಿಸಿದ್ದಾರೆ. ಮುಹಮ್ಮದ್ ಅವರ ಕೊಠಡಿಯ ಹೊರಭಾಗದಲ್ಲಿ ಇರಿಸಲಾಗಿದ್ದ ಟಿಫಿನ್ ಬಾಕ್ಸ್ ಮುಟ್ಟದೇ ಇರುವುದನ್ನು ಪಿಜಿಯ ಸಿಬ್ಬಂದಿಯೊಬ್ಬರು ಗಮನಿಸಿದ್ದರು. ಆನಂತರ ರಾತ್ರಿ 8:00 ಗಂಟೆಯ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತೆಂದು ಸಿಂಗ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶವಾಗಾರವನ್ನು ಇರಿಸಲಾಗಿದೆ.ಕುಟುಂಬಿಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಕೋಟಾಕ್ಕೆ ಧಾವಿಸಿದ್ದಾರಂದು ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ಈ ವರ್ಷದ ಮೊದಲ ತಿಂಗಳಲ್ಲೇ ಕೋಟಾದಲ್ಲಿ ಮೂರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಜೆಇಇ ಪರೀಕ್ಷೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದ 18 ವರ್ಷ ವಯಸ್ಸಿನ ವಿದ್ಯಾರ್ಥಿನಿ ನಿಹಾರಿಕಾ ಸಿಂಗ್ ಕೋಟಾದಲ್ಲಿರುವ ತನ್ನ ಕೊಠಡಿಯಲ್ಲಿನೇಣುಇಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಜನವರಿ 23ರಂದು 19 ವರ್ಷ ವಯಸ್ಸಿನ ಮುಹಮ್ಮದ್ ಝಾಯಿದ್ ಅವರು ಕೋಟಾದಲ್ಲಿರುವ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟಿದ್ದಾರೆ.ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯಲು ಝಾಯಿದ್ ಉತ್ತರಪ್ರದೇಶದ ಮೊರದಾಬಾದ್ ಜಿಲ್ಲೆಗೆ ಆಗಮಿಸಿದ್ದರು.