ಕುಂಭಮೇಳದಲ್ಲಿ ತಪ್ಪಿದ ದುುರಂತ; ಮುಳುಗುತ್ತಿದ್ದ ದೋಣಿಯಿಂದ 17 ಮಂದಿಯ ರಕ್ಷಣೆ

Photo Credit: PTI
ಮಹಾಕುಂಭನಗರ್: ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗರರಾಜ್ನ ತ್ರಿವೇಣಿ ಸಂಗಮದಲ್ಲಿ ಮುಳುಗುತ್ತಿದ್ದ ದೋಣಿಯಿಂದ 17 ಮಂದಿ ಯಾತ್ರಿಕರನ್ನು ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ನ ರಕ್ಷಣಾ ಸಿಬ್ಬಂದಿ ಪಾರು ಮಾಡಿದ್ದು ಅದೃಷ್ಟವಶಾತ್ ಸಂಭಾವ್ಯದುರಂತವೊಂದು ತಪ್ಪಿದೆ.
ಹದಿನೇಳು ಮಂದಿ ಪ್ರಯಾಣಿಕರಿದ್ದ ದೋಣಿಯು ನಿಯಂತ್ರಣ ತಪ್ಪಿ ಗಂಗಾನದಿಯಲ್ಲಿ ಮುಳುಗಲಾರಂಭಿಸಿತು.ಆಗ ಅದರಲ್ಲಿದ್ದ ಯಾತ್ರಿಕರು ಸಹಾಯಕ್ಕಾಗಿ ಆರ್ತನಾದ ಮಾಡಿದರು. ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ಗಸ್ತುತಿರುಗುತ್ತಿದ್ದ ಎನ್ಡಿಆರ್ಎಫ್, ಎಸ್ಡಿಆರ್ಎಫ್ ರಕ್ಷಣಾ ಕಾರ್ಯಕರ್ತರು ತಕ್ಷಣವೇ ಧಾವಿಸಿ ಬಂದು, ಎಲ್ಲರನ್ನೂ ಸುರಕ್ಷಿತವಾಗಿ ಪಾರು ಮಾಡಿದ್ದಾರೆ.
9 ಮಂದಿ ಯಾತ್ರಿಕರನ್ನು ಎನ್ಡಿಆರ್ಎಫ್ ಸುರಕ್ಷಿತವಾಗಿ ಕಾಪಾಡಿದ್ದರೆ, ಇತರ ಎಂಟು ಮಂದಿ ಯಾತ್ರಿಕರನ್ನು ಎಸ್ಡಿಆರ್ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ) ಮತ್ತು ಏಜೆನ್ಸಿಗಳ ಸಿಬ್ಬಂದಿ ಪಾರು ಮಾಡಿದ್ದಾರೆ.
Next Story