ಔತಣಕೂಟದಲ್ಲಿ ಪರಸ್ಪರ ಭೇಟಿಯಾದ ಲಾಲೂ- ರಾಹುಲ್
Photo: twitter.com/INC4IN
ಹೊಸದಿಲ್ಲಿ: ಮೋದಿ ಉಪನಾಮ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿಯವರಿಗೆ ಶಿಕ್ಷೆ ವಿಧಿಸಿದ ಕೆಳ ಹಂತದ ನ್ಯಾಯಾಲಯದ ಕ್ರಮಕ್ಕೆ ಶುಕ್ರವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ಕೆಲವೇ ಗಂಟೆಗಳಲ್ಲಿ ರಾಹುಲ್ಗಾಂಧಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ರಾತ್ರಿ ಔತಣಕೂಟವೊಂದರಲ್ಲಿ ಪರಸ್ಪರ ಭೇಟಿಯಾದರು.
ಆರ್ ಜೆಡಿ ಸಂಸದೆ ಮಿಷಾ ಭಾರ್ತಿಯವರ ದೆಹಲಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡಾ ಪಾಲ್ಗೊಂಡಿದ್ದರು. ಹೊಸದಾಗಿ ರಚನೆಯಾಗಿರುವ 'ಇಂಡಿಯಾ' ಮೈತ್ರಿಕೂಟ ಈ ತಿಂಗಳ ಕೊನೆಯಲ್ಲಿ ಮುಂಬೈನಲ್ಲಿ ಸಭೆ ನಡೆಸುವ ಹಿನ್ನೆಲೆಯಲ್ಲಿ ಉಭಯ ಮುಖಂಡ ಭೇಟಿ ಕುತೂಹಲ ಕೆರಳಿಸಿದೆ.
ಈ ಸಂದರ್ಭಕ್ಕಾಗಿಯೇ ವಿಶೇಷವಾಗಿ ಬಿಹಾರದಿಂದ ಮಾಂಸ ಮತ್ತು ಸಾಂಬಾರ ಪದಾರ್ಥಗಳನ್ನು ಲಾಲೂ ತಂದಿದ್ದರು, ಬಿಹಾರದ ವಿಶೇಷ ಶೈಲಿಯಲ್ಲಿ ಹೇಗೆ ಮಾಂಸದ ಅಡುಗೆ ಮಾಡಲಾಗುತ್ತದೆ ಎಂದು ರಾಹುಲ್ಗೆ ತೋರಿಸಿಕೊಟ್ಟರು.ಲಾಲೂ ಪ್ರಸಾದ್ ಸ್ವತಃ ಸಿದ್ಧಪಡಿಸಿದ ಮಾಂಸದೂಟವನ್ನು ರಾಹುಲ್ ಸವಿದರು. ಲಾಲೂ ಪ್ರಸಾದ್ ಅವರ ಆರೋಗ್ಯ ಸ್ಥಿತಿ ಬಗ್ಗೆಯೂ ರಾಹುಲ್ ವಿಚಾರಿಸಿದರು.