ಲಾಲು ಪ್ರಸಾದ್ ಯಾದವ್, ಪುತ್ರ ತೇಜಸ್ವಿಗೆ ಈಡಿ ಯಿಂದ ಹೊಸದಾಗಿ ಸಮನ್ಸ್
ತೇಜಸ್ವಿ ಯಾದವ್ | Photo: PTI
ಪಾಟ್ನಾ: ಭಾರತೀಯ ರೈಲ್ವೆಗೆ ಸಂಬಂಧಿಸಿದಂತೆ ಉದ್ಯೋಗಗಳಿಗಾಗಿ ಭೂಮಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರ್ ಜೆ ಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ಹಾಗೂ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಜಾರಿ ನಿರ್ದೇಶನಾಲಯ (ಈಡಿ)ವು ಹೊಸದಾಗಿ ಸಮನ್ಸ್ ಹೊರಡಿಸಿದ್ದು, ವಿಚಾರಣೆಗಾಗಿ ತನ್ನ ಪಾಟ್ನಾ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ.
ಲಾಲು ಪ್ರಸಾದ್ ಗೆ ಜ.29ರಂದು ಮತ್ತು ತೇಜಸ್ವಿಗೆ ಜ.30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈಡಿ ತಂಡವು ಸಮನ್ಸ್ ಜಾರಿಗೊಳಿಸಲು ಲಾಲು ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿದವು.
ಪ್ರಕರಣದಲ್ಲಿ ಈಡಿ ಈ ಹಿಂದೆ ಹೊರಡಿಸಿದ್ದ ಸಮನ್ಸ್ ಗಳನ್ನು ಲಾಲು ಮತ್ತು ತೇಜಸ್ವಿ ತಪ್ಪಿಸಿಕೊಂಡಿದ್ದರು.
ಯುಪಿಎ-1 ಸರಕಾರದಲ್ಲಿ ಲಾಲು ಪ್ರಸಾದ್ ರೈಲೆ ಸಚಿವರಾಗಿದ್ದ ಅವಧಿಗೆ ಈ ಹಗರಣವು ಸಂಬಂಧಿಸಿದೆ.
Next Story