ಭೂಕುಸಿತ, ರೈಲ್ವೆ ಹಳಿ ಮೇಲೆ ಬಿದ್ದ ಮರ: ಗೋವಾ-ಕರ್ನಾಟಕ ಮಾರ್ಗದ ರೈಲು ಸಂಚಾರ ವ್ಯತ್ಯಯ

ಸಾಂದರ್ಭಿಕ ಚಿತ್ರ (PTI)
ಪಣಜಿ: ಗುರುವಾರ ಮಧ್ಯರಾತ್ರಿ ಕರ್ನಾಟಕ-ಗೋವಾ ಗಡಿಯ ದೂಧ್ ಸಾಗರ್ ಮತ್ತು ಸೋನೌಲಿಮ್ ವಿಭಾಗಗಳ ಮಧ್ಯೆ ಭೂಕುಸಿತ ಸಂಭವಿಸಿದ್ದರಿಂದ, ನೈರುತ್ಯ ರೈಲ್ವೆಯ ಐದು ರೈಲುಗಳ ಸಂಚಾರ ವ್ಯತ್ಯಯಗೊಂಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಲ್ಲದೆ, ಲೋಂಡಾ ಮತ್ತು ತಿನಾಯ್ ಘಾಟ್ ಮಾರ್ಗದ ಹಳಿಯೊಂದರ ಮೇಲೆ ಮರ ಉರುಳಿ ಬಿದ್ದ ಪರಿಣಾಮ, ಓವರ್ ಹೆಡ್ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಈ ಮಾರ್ಗದ ಹಳಿಯನ್ನು ಮುಚ್ಚಲಾಗಿತ್ತು.
ಈ ಎರಡೂ ಘಟನೆಗಳು ಗುರುವಾರ ಮಧ್ಯರಾತ್ರಿ ವರದಿಯಾಗಿದ್ದು, ಮಣ್ಣು ಹಾಗೂ ಮರವನ್ನು ತೆರವುಗೊಳಿಸಿದ ನಂತರ, ರೈಲ್ವೆ ಸಂಚಾರವನ್ನು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಮರು ಪ್ರಾರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಾಡಿ ತಿಳಿಸಿದ್ದಾರೆ.
Next Story