ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ ಮೊಕದ್ದಮೆ:ಎಲ್ವಿಷ್ ಯಾದವ್ ಬೆದರಿಕೆ
ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಪ್ರಕರಣ
Elvish Yadav//instagram
ಹೊಸದಿಲ್ಲಿ : ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ವಿರುದ್ಧ ಮಾನನಷ್ಟ ಮೊಕದ್ದಮೆಯೊಂದನ್ನು ದಾಖಲಿಸುವುದಾಗಿ ಯೂ ಟ್ಯೂಬರ್ ಎಲ್ವಿಷ್ ಯಾದವ ಬೆದರಿಕೆಯೊಡ್ಡಿದ್ದಾನೆ. ರೇವ್ ಪಾರ್ಟಿಯಲ್ಲಿ ಹಾವಿನ ವಿಷದ ಬಳಕೆಯ ಆರೋಪದಲ್ಲಿ ನೊಯ್ಡಾ ಪೋಲಿಸರು ಯಾದವ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ಯಾದವ್ ವಿರುದ್ಧ ಪೋಲಿಸ್ ದೂರನ್ನು ದಾಖಲಿಸಿರುವ ಮೇನಕಾ ಗಾಂಧಿಯವರ ಎನ್ಜಿಒ ‘ಪೀಪಲ್ ಫಾರ್ ಅ್ಯನಿಮಲ್ಸ್ ’ ಆತನನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದೆ.
ಮೇನಕಾ ಗಾಂಧಿ ತನ್ನ ವಿರುದ್ಧ ಹೊರಿಸಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಯಾದವ್, ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ತನ್ನ ವ್ಲಾಗ್ನಲ್ಲಿ ತಿಳಿಸಿದ್ದಾನೆ.
Next Story