ಸಂಸತ್ ನಲ್ಲಿ ಮಣಿಪುರ ಬಗ್ಗೆ ಪ್ರಧಾನಿ ವಿಸ್ತೃತ ಹೇಳಿಕೆ ನೀಡಲಿ: ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo: PTI
ಹೊಸದಿಲ್ಲಿ: ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿಯವರು ವಿಸ್ತೃತವಾದ ಹೇಳಿಕೆಯನ್ನು ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆಗ್ರಹಿಸಿದ್ದಾರೆ. ಒಂದು ವೇಳೆ ಮಣಿಪುರ ಪರಿಸ್ಥಿತಿ ಬಗ್ಗೆ ಪ್ರಧಾನಿ ಆಕ್ರೋಶವಿದ್ದುದೇ ಆದರೆ, ಅವರು ಕಾಂಗ್ರೆಸ್ ಆಡಳಿತದ ರಾಜ್ಯಗಳ ಪರಿಸ್ಥಿತಿ ಬಗ್ಗೆ ಸುಳ್ಳು ಹೋಲಿಕೆ ಮಾಡುವ ಬದಲು ಅವರು ಆ ರಾಜ್ಯದ ಮುಖ್ಯಮಂತ್ರಿಯನ್ನು ವಜಾಗೊಳಿಸಬೇಕಿತ್ತು ಎಂದವರು ಹೇಳಿದ್ದಾರೆ.
‘‘ನರೇಂದ್ರ ಮೋದಿಜೀಯವರೇ, ನೀವು ನಿನ್ನೆ ಸಂಸತ್ನೊಳಗೆ ಹೇಳಿ (ಮಣಿಪುರ ಹಿಂಸಾಚಾರ ದ ಕುರಿತು)ನೀಡಿಲ್ಲ. ಒಂದು ನೀವು ಆಕ್ರೋಶಗೊಂಡಿದ್ದರೆ, ಕಾಂಗ್ರೆಸ್ ಆಡಳಿತದ ರಾಜ್ಯಗಳೊಂದಿಗೆ ಸುಳ್ಳು ಹೋಲಿಕೆ ಮಾಡುವುದನ್ನು ನೀವು ನಿಮ್ಮ ಮುಖ್ಯಮಂತ್ರಿಯನ್ನು ವಜಾಗೊಳಿಸಬೇಕಿತ್ತು’’ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಸಂಸತ್ನಲ್ಲಿ ನೀವು ಮಣಿಪುರದ ಬಗ್ಗೆ ವಿಸ್ತೃತವಾದ ಹೇಳಿಕೆಯನ್ನು ನೀಡಬೇಕಂದು ಭಾರತವು ನಿರೀಕ್ಷಿಸುತ್ತಿದೆ. ಆದರೆ 80 ದಿನಗಳ ಈ ಹಿಂಸಾಚಾರದ ಅವಧಿಯಲ್ಲಿ ಆ ರಾಜ್ಯದಲ್ಲಿರುವ ನಿಮ್ಮ ಸರಕಾರ ಹಾಗೂ ಕೇಂದ್ರ ಸರಕಾರವು ಸಂಪೂರ್ಣವಾಗಿ ಅಸಹಾಯಕ ಹಾಗೂ ಪಶ್ಚಾತ್ತಾಪರಹಿತವಾಗಿ ಕಾಣುತ್ತಿವೆ’’ ಎಂದು ಕಾಂಗ್ರೆಸ್ಅಧ್ಯಕ್ಷ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಘಟನೆಯು 140 ಭಾರತೀಯರನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಕಾನೂನು ಸಂಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸಲಿದೆ ಹಾಗೂ ಯಾವುದೇ ತಪ್ಪಿತಸ್ಥನನ್ನು ಪಾರಾಗಲು ಅವಕಾಶ ನೀಡಲಾಗುವುದಿಲ್ಲ ಎಂದರು.