ಲೋಕಸಭೆ, ರಾಜ್ಯಸಭೆಯಲ್ಲೂ ಸದ್ದು ಮಾಡಿದ ಅದಾನಿ ಲಂಚ ಪ್ರಕರಣ: ಉಭಯ ಸದನಗಳ ಕಲಾಪ ನ.27ಕ್ಕೆ ಮುಂದೂಡಿಕೆ
Photo credit: PTI
ಹೊಸದಿಲ್ಲಿ: ಚಳಿಗಾಲದ ಅಧಿವೇಶನದ ಆರಂಭದ ದಿನವಾದ ಸೋಮವಾರ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಅದಾನಿ ಲಂಚ ಪ್ರಕರಣ, ಮಣಿಪುರ ಹಿಂಸಾಚಾರ ಸದ್ದು ಮಾಡಿದ್ದು, ಪ್ರತಿಪಕ್ಷಗಳ ಪ್ರತಿಭಟನೆ ಬೆನ್ನಲ್ಲೇ ಕಲಾಪವನ್ನು ನವೆಂಬರ್ 27ಕ್ಕೆ ಮುಂದೂಡಲಾಗಿದೆ.
ಸಂಸತ್ತಿನಲ್ಲಿ ಅದಾನಿ ಲಂಚ ಪ್ರಕರಣ, ಮಣಿಪುರ ಹಿಂಸಾಚಾರ ವಿಚಾರಗಳ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪಟ್ಟು ಹಿಡಿದಿದೆ. ಇದರ ಬೆನ್ನಲ್ಲೇ ಮಧ್ಯಾಹ್ನ 12ಗಂಟೆಗೆ ಸಭಾಪತಿ ಕಲಾಪವನ್ನು ಬುಧವಾರಕ್ಕೆ ಮುಂದೂಡಿದ್ದಾರೆ. ಮಂಗಳವಾರ (ನವೆಂಬರ್ 26) ಸಂವಿಧಾನ ದಿನವಾದ ಹಿನ್ನೆಲೆ ಯಾವುದೇ ಅಧಿವೇಶನ ನಡೆಯುವುದಿಲ್ಲ.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಅದಾನಿ ಗ್ರೂಪ್ ವಿರುದ್ಧದ ಲಂಚದ ಆರೋಪ ಮತ್ತು ಮಣಿಪುರ ಹಿಂಸಾಚಾರ, ಉತ್ತರ ಭಾರತದಲ್ಲಿ ತೀವ್ರ ವಾಯು ಮಾಲಿನ್ಯ ಬಗ್ಗೆ ಸದನದಲ್ಲಿ ಚರ್ಚೆಗೆ ಪಟ್ಟು ಹಿಡಿದಿದೆ. ಈ ವೇಳೆ ಉಭಯ ಸದನಗಳ ಸಭಾಪತಿಗಳು ಕಲಾಪವನ್ನು ಮುಂದೂಡಿದ್ದಾರೆ.
Next Story