ನೂತನ ಸಂಸತ್ ಭವನದ ಉದ್ಯೋಗಿಗಳಿಗೂ ಹೊಸ ವಸ್ತ್ರಸಂಹಿತೆ; ಸಮವಸ್ತ್ರದಲ್ಲಿ ಕಮಲದ ಚಿಹ್ನೆ, ಖಾಕಿ ಬಣ್ಣದ ಪ್ಯಾಂಟ್!
ನೂತನ ಸಂಸತ್ ಭವನ (PTI)
ಹೊಸದಿಲ್ಲಿ: ಸೆಪ್ಟೆಂಬರ್ 18ರಿಂದ 22ರ ತನಕ ಸಂಸತ್ತಿನ ವಿಶೇಷ ಅಧಿವೇಶನ ನೂತನ ಸಂಸತ್ ಭವನದಲ್ಲಿ ನಡೆಸಲು ಸಿದ್ಧತೆಗಳು ಆರಂಭಗೊಂಡಿರುವ ನಡುವೆ ಸಂಸತ್ ಉದ್ಯೋಗಿಗಳ ಸಮವಸ್ತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗಿದೆ. “ಭಾರತೀಯತೆ”ಯನ್ನು ಪ್ರತಿಬಿಂಬಿಸುವ ಉದ್ದೇಶದೊಂದಿಗೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ಹೊಸ ವಸ್ತ್ರ ಸಂಹಿತೆ ಸಂಸತ್ತಿನ ಎರಡೂ ಸದನಗಳ ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಪುರುಷ ಉದ್ಯೋಗಿಗಳು ಕ್ರೀಮ್ ಬಣ್ಣದ ಹಾಗೂ ಗುಲಾಬಿ ಬಣ್ಣದ ತಾವರೆ ಪ್ರಿಂಟ್ ಹೊಂದಿದ ಜಾಕೆಟ್ ಹಾಗೂ ಖಾಕಿ ಬಣ್ಣದ ಪ್ಯಾಂಟ್ ಧರಿಸಲಿದ್ದರೆ ಮಹಿಳಾ ಉದ್ಯೋಗಿಗಳಿಗೆ ಹೊಸ ಸೀರೆಗಳು ದೊರೆಯಲಿವೆ ಎಂದು ವರದಿಯಾಗಿದೆ.
ಅಧಿಕಾರಿಗಳು ಈ ಹಿಂದೆ ಬಂದ್ಗಲಾ ಸೂಟ್ ಧರಿಸುತ್ತಿದ್ದರೆ ಈಗ ಅವುಗಳ ಬದಲು ಮೆಜೆಂತಾ ಅಥವಾ ಕಡು ಗುಲಾಬಿ ಬಣ್ಣದ ಜಾಕೆಟ್ ಧರಿಸಲಿದ್ದಾರೆ. ಅವರ ಶರ್ಟ್ಗಳು ಕಡು ಗುಲಾಬಿ ಬಣ್ಣದ್ದಾಗಿರಲಿವೆ ಹಾಗೂ ತಾವರೆ ಹೂವಿನ ವಿನ್ಯಾಸ ಹೊಂದಿರಲಿವೆ.
ಎರಡೂ ಸದನದ ಮಾರ್ಷಲ್ಗಳ ಬದಲಾವಣೆಗೊಂಡ ವಸ್ತ್ರಸಂಹಿತೆ ಭಾಗವಾಗಿ ಅವರು ಮಣಿಪುರಿ ಪೇಟ ಧರಿಸಲಿದ್ದಾರೆ.