ಮಧ್ಯಪ್ರದೇಶ | ಅಭಯಾರಣ್ಯದಲ್ಲಿ ನಿಗೂಢವಾಗಿ ಮೃತಪಟ್ಟ ಆನೆಗಳ ಸಂಖ್ಯೆ 7ಕ್ಕೇರಿಕೆ ; SIT ತನಿಖೆಗೆ ಆದೇಶ
ಸಾಂದರ್ಭಿಕ ಚಿತ್ರ
ಉಮಾರಿಯಾ : ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಬಂದ್ವಾಗಡ ಹುಲಿ ಅಭಯಾರಣ್ಯದಲ್ಲಿ ಬುಧವಾರ ಇನ್ನೂ ಮೂರು ಆನೆಗಳು ಸಾವನ್ನಪ್ಪಿವೆ. ಇದರೊಂದಿಗೆ ಕಳೆದ ಕೆಲವು ದಿನಗಳಲ್ಲಿ ಈ ಅಭಯಾರಣ್ಯದಲ್ಲಿ ಸಾವನ್ನಪ್ಪಿದ ಆನೆಗಳ ಸಂಖ್ಯೆ ಏಳಕ್ಕೇರಿದೆ. ಇನ್ನೂ ಮೂರು ಆನೆಗಳ ಸ್ಥಿತಿ ಗಂಭೀರವಾಗಿದೆಯೆಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಎಳಿಸಿದ್ದಾರೆ.
ಆನೆಗಳ ಸಾವಿಗೆ ಸಂಬಂಧಿಸಿ ವಿಶೇಷ ತನಿಖಾ ತಂಡದಿಂದ ತನಿಖೆಗೆ ಮಧ್ಯಪ್ರದೇಶ ಅರಣ್ಯ ಇಲಾಖೆಯ ಸಚಿವ ರಾಮನಿವಾಸ ರಾವತ್ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣಕ್ರಮಕ್ಕೆ ಸೂಚಿಸಿದ್ದಾರೆ.
ಈ ಆನೆಗಳು ಹಾರಕ ಎಂಬ ಸಿರಿಧಾನ್ಯವನ್ನು ಸೇವಿಸಿದ ಬಳಿಕ ಅಸ್ವಸ್ಥಗೊಂಡು ಸಾವನ್ನಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ನಿಖರವಾದ ಕಾರಣವು ಆನೆಗಳ ಕಳೇಬರಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ ಬಳಿಕ ಸ್ಪಷ್ಟಗೊಳ್ಳಲಿದೆಯೆಂದು ಎಂದವರು ಹೇಳಿದ್ದಾರೆ.
ಬಂದ್ವಾಗಡ ಅರಣ್ಯ ಇಲಾಖೆಯ ಸಿಬ್ಬಂದಿ ದೈನಂದಿನ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಒಂದೇ ಹಿಂಡಿನಲ್ಲಿದ್ದ 13 ಆನೆಗಳ ನಾಲ್ಕು ಆನೆಗಳು ಸಾವನ್ನಪ್ಪಿರುವುದನ್ನು ಮಂಗಳವಾರ ಕಂಡಿದ್ದರು. ಅದೇ ಗುಂಪಿನ ಇನ್ನೂ ಮೂರು ಆನೆಗಳು ಇಂದು ಕೊನೆಯುಸಿರೆಲೆದಳೆದಿರುವುದಾಗಿ ಸಚಿವ ರಾಮನಿವಾಸ್ ರಾವತ್ ತಿಳಿಸಿದ್ದಾರೆ.
ಹಿಂಡಿನಲ್ಲಿರುವ ಇತರಹ ಮೂರು ಆನೆಗಳ ಸ್ಥಿತಿಯೂ ಗಂಭೀರವಾಗಿದ್ದು, ಅವುಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ತಂಡದ ಭಾಗವಾಗಿರುವ ಉಳಿದ ಆನೆಗಳ ಚಲವಲನಗಳ ಬಗೆಗೂ ಬಿಟಿಆರ್ ತಂಡಗಳು ನಿಗಾವಿರಿಸಿರುವುದಾಗಿ ಅವರು ಹೇಳಿದ್ದಾರೆ.