ಮಧ್ಯಪ್ರದೇಶ ಸಂಪುಟ ವಿಸ್ತರಣೆ: ಪ್ರಮಾಣ ವಚನ ಸ್ವೀಕರಿಸಿದ 28 ಶಾಸಕರು
Photo: PTI
ಭೋಪಾಲ: ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಮಧ್ಯಪ್ರದೇಶ ಸಂಪುಟಕ್ಕೆ ಸೋಮವಾರ ಕೇಂದ್ರದ ಮಾಜಿ ಸಚಿವ ಪ್ರಹ್ಲಾದ್ ಪಟೇಲ್ ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಸೇರಿದಂತೆ 28 ಶಾಸಕರು ಸೇರ್ಪಡೆಗೊಂಡರು.
ಒಟ್ಟು 18 ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 6 ಮಂದಿ ಸ್ವತಂತ್ರ್ಯ ಉಸ್ತುವಾರಿ ಸೇರಿದಂತೆ 10 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಲ್ಲಿನ ರಾಜಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜ್ಯಪಾಲ ಮಂಗುಭಾ ಪಟೇಲ್ ಅವರು ಪ್ರಮಾಣ ವಚನ ಬೋಧಿಸಿದರು.
ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರೆಂದರೆ ವಿಜಯ್ ಶಾಹ್, ಕೈಲಾಸ್ ವಿಜಯವರ್ಗೀಯ, ಪ್ರಹ್ಲಾದ್ ಪಟೇಲ್, ಕರಣ್ ಸಿಂಗ್ ವರ್ಮಾ, ರಾಕೇಶ್ ಸಿಂಗ್, ಉದಯ ಪ್ರತಾಪ್ ಸಿಂಗ್, ಸಂಪತೀಯ ಉಯಿಕೆ, ತುಲ್ಸಿರಾಮ್ ಸಿಲಾವತ್, ಐದಾಲ್ ಸಿಂಗ್ ಕನ್ಸಾನ, ಗೋವಿಂದ ಸಿಂಗ್ ರಜಪೂತ್, ವಿಶ್ವಾಸ್ ಸಾರಂಗ್, ನಿರ್ಮಲಾ ಭುರಿಯಾ, ನಾರಾಯಣ್ ಸಿಂಗ್ ಕುಶವಾಹ, ನಗರ್ ಸಿಂಗ್ ಚೌಹಾಣ್, ಪ್ರದ್ಯುಮ್ನ ಸಿಂಗ್ ತೋಮರ್, ರಾಕೇಶ್ ಶುಕ್ಲಾ, ಚೈತನ್ಯ ಕಶ್ಯಪ್ ಹಾಗೂ ಇಂದರ್ ಸಿಂಗ್ ಪರ್ಮಾರ್.
ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರೆಂದರೆ ಕೃಷ್ಣ ಗೌರ್, ಧರ್ಮೇಂದ್ರ ಭಾವ್ ಲೋಧಿ, ದಿಲೀಪ್ ಜೈಸ್ವಾಲ್, ಗೌತಮ್ ತೆತ್ವಾಲ್, ಲಖನ್ ಪಟೇಲ್ ಹಾಗೂ ನಾರಾಯಣ ಸಿಂಗ್ ಪವಾರ್.
ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಇತರ ಶಾಸಕರೆಂದರೆ ನರೇಂದ್ರ ಶಿವಾಜಿ ಪಟೇಲ್, ಪ್ರತಿಮಾ ಬಾಗ್ರಿ, ದಿಲೀಪ್ ಅಹಿರ್ವಾರ ಹಾಗೂ ರಾಧಾ ಸಿಂಗ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಮೋಹನ್ ಯಾದವ್ ಅವರ ಸಂಪುಟದಲ್ಲಿ ಸಂಪತಿಯ ಉಲಿಕೆ, ನಿರ್ಮಲಾ ಭುರಿಯಾ, ಕೃಷ್ಣ ಗೌರ್, ಪ್ರತಿಮಾ ಬಾಗ್ರಿ ಹಾಗೂ ರಾಧಾ ಸಿಂಗ್ ಮೊದಲಾದ ಐವರು ಮಹಿಳೆಯರು ಕೂಡ ಸೇರಿದ್ದಾರೆ.
ಮೋಹನ್ ಯಾದವ್ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳಾದ ರಾಜೇಂದ್ರ ಶುಕ್ಲಾ ಹಾಗೂ ಜಗದೀಶ್ ದೆವೋರ ಸೇರಿದಂತೆ ಈಗ ಸಂಪುಟದ ಒಟ್ಟು ಬಲಾಬಲ 31.