ವಿಚ್ಛೇದನ ಪ್ರಕ್ರಿಯೆ ಅವಧಿಯಲ್ಲಿ ಮುಸ್ಲಿಮ್ ಮಹಿಳೆಗೆ ಮಧ್ಯಂತರ ಜೀವನಾಂಶ ಮಂಜೂರು ಮಾಡಬಹುದು: ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್ | PC : PTI
ಚೆನ್ನೈ: ಮುಸ್ಲಿಮ್ ವಿವಾಹ ವಿಚ್ಛೇದನ ಕಾಯ್ದೆ,1939ರಡಿ ವಿಚ್ಛೇದನವನ್ನು ಕೋರಿ ಅರ್ಜಿ ಸಲ್ಲಿಸಿರುವ ಮುಸ್ಲಿಮ್ ಮಹಿಳೆಗೆ ನ್ಯಾಯಾಲಯವು ಆಕೆಯ ಅರ್ಜಿಯನ್ನು ಇತ್ಯರ್ಥಗೊಳಿಸುವವರೆಗೆ ಮಧ್ಯಂತರ ಜೀವನಾಂಶವನ್ನು ಮಂಜೂರು ಮಾಡಬಹುದು ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
ಮಧ್ಯಂತರ ಜೀವನಾಂಶವನ್ನು ಮಂಜೂರು ಮಾಡಲು 1939ರ ಕಾಯ್ದೆಯಲ್ಲಿ ಅವಕಾಶವಿಲ್ಲವಾದರೂ ನಾಗರಿಕ ಪ್ರಕ್ರಿಯಾ ಸಂಹಿತೆ(ಸಿಸಿಪಿ)ಯ ಕಲಂ 151ರಡಿ ನ್ಯಾಯಾಲಯಗಳು ಮಧ್ಯಂತರ ಜೀವನಾಂಶಕ್ಕೆ ಆದೇಶಿಸಬಹುದು ಎಂದು ನ್ಯಾ.ವಿ.ಲಕ್ಷ್ಮೀನಾರಾಯಣ ಅವರು ತನ್ನ ಸೆ.2ರ ಆದೇಶದಲ್ಲಿ ಹೇಳಿದ್ದಾರೆ.
ತನ್ನ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಪತ್ನಿ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಾಗ ಅದು ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿರಲು ಸಾಧ್ಯವಿಲ್ಲ ಎಂದು ನ್ಯಾ.ಲಕ್ಷ್ಮೀನಾರಾಯಣ ಹೇಳಿದ್ದಾರೆ.
ತನ್ನ ಪರಿತ್ಯಕ್ತ ಪತ್ನಿಗೆ ಮಾಸಿಕ 20,000 ರೂ.ಗಳ ಮಧ್ಯಂತರ ಜೀವನಾಂಶವನ್ನು ಮತ್ತು ವ್ಯಾಜ್ಯ ವೆಚ್ಚವಾಗಿ 10,000 ರೂ.ಗಳನ್ನು ಪಾವತಿಸುವಂತೆ ಕುಟುಂಬ ನ್ಯಾಯಾಲಯದ ಆದೇಶದ ವಿರುದ್ಧ ವ್ಯಕ್ತಿಯೋರ್ವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು