ಫೆ. 12ರ ವರೆಗೆ ಮಹಾಕುಂಭ ಮೇಳ ಪ್ರದೇಶ ವಾಹನ ರಹಿತ ವಲಯವೆಂದು ಘೋಷಣೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮಹಾಕುಂಭ ಮೇಳದ ಪ್ರದೇಶಕ್ಕೆ ಫೆಬ್ರವರಿ 12ರ ವರೆಗೆ ಯಾವುದೇ ವಾಹನಗಳು ಪ್ರವೇಶಿಸದಂತೆ ಪ್ರಯಾಗರಾಜ್ ಜಿಲ್ಲಾಡಳಿತ ನಿಷೇಧ ವಿಧಿಸಿದೆ.
ಈ ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ 4 ಗಂಟೆಯಿಂದ ವಾಹನಗಳು ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿದೆ. ಇದರಿಂದಾಗಿ ಮಂಗಳವಾರ ಸಂಜೆ 5 ಗಂಟೆಯಿಂದ ಪ್ರಯಾಗರಾಜ್ ನಗರ ಕೂಡ ವಾಹನ ರಹಿತ ವಲಯವಾಗಿ ಮಾರ್ಪಾಟಾಗಿದೆ.
ಫೆಬ್ರವರಿ 12ರಂದು ಮಾಘಿ ಪೂರ್ಣಿಮಾ ಹಿನ್ನೆಲೆಯಲ್ಲಿ ಈ ನಿರ್ಬಂಧ ಹೇರಲಾಗಿದೆ. ಅದೇ ದಿನ ಪುಣ್ಯ ಸ್ನಾನದ ವರೆಗೆ ಈ ನಿರ್ಬಂಧ ಚಾಲ್ತಿಯಲ್ಲಿರಲಿದೆ ಎಂದು ಪ್ರಯಾಗರಾಜ್ ಜಿಲ್ಲಾಡಳಿತ ತಿಳಿಸಿದೆ.
Next Story