ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಮಹಾಯುತಿ ವಿಜಯದ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಐವರು ʼಇಂಡಿಯಾʼ ಅಭ್ಯರ್ಥಿಗಳು
ಬಾಂಬೆ ಹೈಕೋರ್ಟ್ | PC : PTI
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಪರಾಭವಗೊಂಡಿರುವ ಐವರು ಅಭ್ಯರ್ಥಿಗಳು ಎದುರಾಳಿ ಮಹಾಯುತಿ ಅಭ್ಯರ್ಥಿಗಳ ಗೆಲುವುಗಳನ್ನು ಪ್ರಶ್ನಿಸಿ ಬಾಂಬೆ ಉಚ್ಛ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅಭ್ಯರ್ಥಿಗಳು ʼಇಂಡಿಯಾ ಮೈತ್ರಿಕೂಟʼದ ವಿವಿಧ ಪಕ್ಷಗಳಿಗೆ ಸೇರಿದವರಾಗಿದ್ದಾರೆ.
ಮನೋಹರ್ ಕೃಷ್ಣ ಮಢವಿ, ಪ್ರಶಾಂತ್ ಸುದಾಮ್ ಜಗತಾಪ್,ಮಹೇಶ್ ಕೋಥೆ,ನರೇಶ್ ರತನ್ ಮಣೇರಾ ಮತ್ತು ಸುನಿಲ್ ಚಂದ್ರಕಾಂತ್ ಭುಸಾರಾ ಅವರು ಈ ಅರ್ಜಿಗಳನ್ನು ಸಲ್ಲಿಸಿದ್ದು ತಾವು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿಯ ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.
ನಕಲಿ ಮತದಾನ, ಕ್ರಿಮಿನಲ್ ಪ್ರಕರಣಗಳು ಮತ್ತು ಆಸ್ತಿ ವಿವರಗಳ ಬಚ್ಚಿಡುವಿಕೆ,ಇವಿಎಂ ದೋಷಗಳು, ಲಂಚ ಸೇರಿದಂತೆ ಚುನಾವಣೆಯಲ್ಲಿನ ಅಕ್ರಮಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಅರ್ಜಿದಾರರು ಆರೋಪಿಸಿದ್ದಾರೆ.
Next Story