ಕೂದಲೆಳೆ ಅಂತರದಲ್ಲಿ ಗೆದ್ದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ!
PC: x.com/NANA_PATOLE
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡಿದ್ದು, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ ಕೂದಲೆಳೆ ಅಂತರದ ಜಯ ಸಾಧಿಸಿ ಮುಖಭಂಗ ತಪ್ಪಿಸಿಕೊಂಡರು.
ಸಕೋಲಿ ಕ್ಷೇತ್ರದಲ್ಲಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿಗಿಂತ ಕೇವಲ 208 ಮತಗಳ ಅಂತರದಿಂದ ಗೆದ್ದರು. ಹಾಲಿ ಶಾಸಕರಾಗಿರುವ ಪಟೋಲೆ 96795 ಮತಗಳನ್ನು ಗಳಿಸಿದರೆ ಅವರ ಸಮೀಪದ ಸ್ಪರ್ಧಿ ಬಿಜೆಪಿಯ ಅವಿನಾಶ್ ಬ್ರಹ್ಮಂಕರ್ 96,587 ಮತಗಳನ್ನು ಪಡೆದರು.
ಪಕ್ಷೇತರ ಅಭ್ಯರ್ಥಿ ಸೋಮದತ್ತ ಕರ್ಕಂಜೇಕರ್ 18309 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು. ರಾಜ್ಯದಲ್ಲಿ ಅವರ ನೇತೃತ್ವದ ಕಾಂಗ್ರೆಸ್ ಪಕ್ಷ ಹಾಗೂ ಮಹಾ ವಿಕಾಸ ಅಗಾಡಿ ಹೀನಾಯ ಸೋಲು ಅನುಭವಿಸಿದರೂ, ಪಟೋಲೆ ಕೂದಲೆಳೆ ಅಂತರದ ಜಯ ಸಾಧಿಸುವ ಮೂಲಕ ಮುಖಭಂಗ ತಪ್ಪಿಸಿಕೊಂಡರು.
Next Story