ಮಹಾರಾಷ್ಟ್ರ: ಅಂಬರನಾಥದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ; ಇಡೀ ನಗರಕ್ಕೆ ವ್ಯಾಪಿಸಿದ ಅನಿಲ
PC: x.com/ndtv
ಮುಂಬೈ: ಮಹಾರಾಷ್ಟ್ರದ ಅಂಬರನಾಥದಲ್ಲಿ ಕೆಮಿಕಲ್ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿದ್ದು, ಇಡೀ ನಗರಕ್ಕೆ ಅನಿಲ ವ್ಯಾಪಿಸಿ ಆತಂಕ ಸೃಷ್ಟಿಸಿದೆ.
ರಾಸಾಯನಿಕ ಹೊಗೆಯು ಇಡೀ ನಗರದಲ್ಲಿ ಹರಡಿ ಕೊಂಡಿದ್ದು, ವಾತಾವರಣ ಮೋಡ ಕವಿದಂತಿದೆ. ಜನರು ಕಣ್ಣು ಮತ್ತು ಗಂಟಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಅನುಭವಿಸಿದ್ದು, 1984ರ ಭೋಪಾಲ್ ಅನಿಲ ದುರಂತದ ನೆನಪುಗಳನ್ನು ಮರಳಿ ನೆನಪಿಸಿದಂತಿದೆ.
ಈ ಕುರಿತು ವೈರಲ್ ಆದ ವಿಡಿಯೋಗಳಲ್ಲಿ ನಗರದ ರಸ್ತೆಗಳು ಹೊಗೆಯಿಂದ ಆವರಿಸಿಕೊಂಡಿರುವುದನ್ನು ತೋರಿಸುತ್ತದೆ. ಜನರು ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಂಡು ಸಂಚರಿಸುತ್ತಿರುವುದು ಕಂಡು ಬಂದಿದೆ.
ಯಾವುದೇ ತೀವ್ರ ಅನಾರೋಗ್ಯ ಅಥವಾ ಪ್ರಾಣಾಪಾಯದ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಅನಿಲ ಸೋರಿಕೆಗೆ ಕಾರಣವನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ತಂಡಗಳನ್ನು ಕೂಡ ಕಳುಹಿಸಲಾಗಿದೆ. ಜನರು ಮನೆ ಬಿಟ್ಟು ಹೊರ ಬರದಂತೆ ಅಧಿಕಾರಿಗಳು ತಿಳಿಸಿದ್ದಾರೆ.
Next Story