ಮಹಾರಾಷ್ಟ್ರದಲ್ಲಿ ಸುದ್ದಿಗಳನ್ನು ಪರಿಶೀಲನೆ ನಡೆಸಲಿರುವ ಮಾಧ್ಯಮ ನಿಯಂತ್ರಣಾ ಕೇಂದ್ರ!

Photo | PTI
ಮುಂಬೈ : ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಸುದ್ದಿಗಳನ್ನು ಪರಿಶೀಲಿಸಲು, ವಿಶ್ಲೇಷಿಸಲು, ವರದಿ ಮಾಡಲು ಮಹಾರಾಷ್ಟ್ರ ಸರಕಾರ ʼಮಾಧ್ಯಮ ನಿಯಂತ್ರಣಾ ಕೇಂದ್ರʼ ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಬಜೆಟ್ನಲ್ಲಿ 10 ಕೋಟಿ ರೂ. ಮೀಸಲಿರಿಸಿದೆ.
ʼಮಾಧ್ಯಮ ನಿಯಂತ್ರಣಾ ಕೇಂದ್ರʼ ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳಲ್ಲಿನ ಎಲ್ಲಾ ವಾಸ್ತವಿಕ ಮತ್ತು ತಪ್ಪುದಾರಿಗೆಳೆಯುವ ವರದಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಿದೆ. ಕೊನೆಗೆ ವಾಸ್ತವಿಕ ವರದಿಯನ್ನು ಸಿದ್ದಪಡಿಸಲಿದೆ. ದಾರಿತಪ್ಪಿಸುವ ಸುದ್ದಿಯಿದ್ದರೆ ಅದನ್ನು ನೈಜ ಸಮಯದಲ್ಲಿ ಸ್ಪಷ್ಟಪಡಿಸಲಿದೆ. ನಕಾರಾತ್ಮಕ ಸುದ್ದಿ ಬಂದರೆ ಶೀಘ್ರವಾಗಿ ಸ್ಪಷ್ಟೀಕರಣ ನೀಡಲಿದೆ.
ಪತ್ರಿಕೆಗಳು, ಚಾನೆಲ್ಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಹೆಚ್ಚಳದಿಂದಾಗಿ ನಿಯಂತ್ರಣಾ ಕೇಂದ್ರದ ಅಗತ್ಯವಿದೆ. ಸರಕಾರದ ಯೋಜನೆಗಳು, ನೀತಿಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಹೇಗೆ ನೀಡಲಾಗುತ್ತಿದೆ ಎಂದು ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.
Next Story