ಮಹಾರಾಷ್ಟ್ರ : ರತನ್ ಟಾಟಾಗೆ ‘ಉದ್ಯೋಗ ರತ್ನ’ ಪ್ರಶಸ್ತಿ ಪ್ರದಾನ
ರತನ್ ಟಾಟಾ ಅವರಿಗೆ ಮಹಾರಾಷ್ಟ್ರದ ‘ಉದ್ಯೋಗ ರತ್ನ’ ಪ್ರಶಸ್ತಿ | Photo: ANI
ಮುಂಬೈ: ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಶನಿವಾರ ಮಹಾರಾಷ್ಟ್ರದ ‘ಉದ್ಯೋಗ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟಾಟಾ ಸನ್ಸ್ ನ ಗೌರವ ಅಧ್ಯಕ್ಷರಾಗಿರುವ 85 ವರ್ಷದ ರತನ್ ಟಾಟಾ ಅವರಿಗೆ ದಕ್ಷಿಣ ಮುಂಬೈಯ ಕೊಲಬಾದಲ್ಲಿರುವ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹಾಗೂ ಅಜಿತ್ ಪವಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
Next Story