ಮಹಾರಾಷ್ಟ್ರ ಸ್ಥಾನ ಹಂಚಿಕೆ ಒಪ್ಪಂದ | 20 ಸ್ಥಾನಗಳಿಗೆ ಶಿವಸೇನೆ (ಠಾಕ್ರೆ), 18 ಸ್ಥಾನಗಳಿಗೆ ಕಾಂಗ್ರೆಸ್, 10 ಸ್ಥಾನಗಳಿಗೆ ಎನ್ಸಿಪಿ(ಶರದ್ ಪವಾರ್) ಬಣದ ಸ್ಪರ್ಧೆ
ಉದ್ಧವ್ ಠಾಕ್ರೆ, ಶರದ್ ಪವಾರ್ | Photo: PTI
ಮುಂಬೈ : ರಾಜ್ಯದ 48 ಲೋಕಸಭಾ ಕ್ಷೇತ್ರಗಳಿಗಾಗಿ ಮಹಾರಾಷ್ಟ್ರ ಪ್ರತಿಪಕ್ಷ ಮೈತ್ರಿಕೂಟ ಮಹಾ ವಿಕಾಸ ಅಘಾಡಿ (ಎಂವಿಎ) ಸ್ಥಾನ ಹಂಚಿಕೆ ಮಾತುಕತೆಗಳನ್ನು ಪೂರ್ಣಗೊಳಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20, ಕಾಂಗ್ರೆಸ್ 18 ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ 10 ಸ್ಥಾನಗಳಿಗೆ ಸ್ಪರ್ಧಿಸಲಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಶೇತ್ಕರಿ ಸಂಘಟನ್ನಂತಹ ಸಣ್ಣ ಪಕ್ಷಗಳಿಗೆ ಆಯಾ ಮೈತ್ರಿ ಪಾಲುದಾರರು ಸ್ಥಾನಗಳನ್ನು ನೀಡಲಿದ್ದಾರೆ. ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಅಘಾಡಿ ಮೈತ್ರಿಕೂಟಕ್ಕೆ ಸೇರಿದರೆ ಅದಕ್ಕೆ ಶಿವಸೇನೆ ಮತ್ತು ಕಾಂಗ್ರೆಸ್ ಕೋಟಾದಿಂದ ಮೂರು ಸ್ಥಾನಗಳನ್ನು ನೀಡಬಹುದು ಎಂದು ಎಂವಿಎ ಮೂಲಗಳು ತಿಳಿಸಿದವು.
ಬಿಜೆಪಿಯು ಮೈತ್ರಿಕೂಟದ ಅಭ್ಯರ್ಥಿಗಳನ್ನು ಸೆಳೆಯಲು ಪ್ರಯತ್ನಿಸಬಹುದು ಅಥವಾ ಅವರಿಗೆ ಬೆದರಿಕೆಯೊಡ್ಡಬಹುದು. ಇದನ್ನು ನಾವು ತಪ್ಪಿಸಬೇಕಿದೆ. ಹೀಗಾಗಿ ವಿದ್ಯುಕ್ತ ಪ್ರಕಟಣೆ ವಿಳಂಬಗೊಳ್ಳಬಹುದು ಎಂದು ಈ ಮೂಲಗಳು ತಿಳಿಸಿದವು.