ಆನಂದ್ ಮಹೀಂದ್ರಾ ಮತ್ತಿತರರ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತು ಸ್ಪಷ್ಟಣೆ ನೀಡಿದ ಮಹೀಂದ್ರಾ ಆ್ಯಂಡ್ ಮಹೀಂದ್ರಾ
ಆನಂದ್ ಮಹೀಂದ್ರಾ | Photo: PTI
ಹೊಸದಿಲ್ಲಿ: ಕಾರು ಸುರಕ್ಷತೆಯ ಕುರಿತು ಸುಳ್ಳು ಆಶ್ವಾಸನೆಗಳನ್ನು ನೀಡಲಾಗಿದೆ ಎಂದು ಆನಂದ್ ಮಹೀಂದ್ರಾ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂಬ ವದಂತಿಗಳ ಕುರಿತು ಸೋಮವಾರ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಸ್ಪಷ್ಟೀಕರಣ ನೀಡಿದೆ. ಕಾರು ಅಪಘಾತದಲ್ಲಿ ತನ್ನ ಪುತ್ರನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಉತ್ತರ ಪ್ರದೇಶದಲ್ಲಿ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಹಾಗೂ 12 ಮಂದಿ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಕಳೆದ ಶುಕ್ರವಾರ ವರದಿಯಾಗಿತ್ತು.
ಇದಕ್ಕೆ ಪ್ರತಿಯಾಗಿ ತನ್ನ ಸಂಸ್ಥೆಯ ವಿರುದ್ಧ ದಾಖಲಾಗಿರುವ ಪ್ರಕರಣವು 18 ತಿಂಗಳಿನಷ್ಟು ಹಳೆಯದಾಗಿದ್ದು, ವರದಿಯಾಗಿರುವ ಅಪಘಾತದ ಘಟನೆ ನಡೆದಿರುವುದು ಜನವರಿ 2022ರಲ್ಲಿ ನಡೆದಿರುವುದು ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಸ್ಪಷ್ಟೀಕರಣ ನೀಡಿದೆ.
ಮಹೀಂದ್ರಾ ಸಂಸ್ಥೆಯ ಕಾರಿನಲ್ಲಿ ಏರ್ ಬ್ಯಾಗ್ ಇರಲಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯು, "2020ರಲ್ಲಿ ಉತ್ಪಾದನೆಯಾಗಿರುವ ಸ್ಕಾರ್ಪಿಯೊ ಎಸ್9 ಕಾರಿನಲ್ಲಿ ಏರ್ ಬ್ಯಾಗ್ ಇರಲಿಲ್ಲ ಎಂಬ ಸಂಗತಿಯನ್ನು ನಾವು ಮರು ದೃಢೀಕರಣ ಪಡಿಸುತ್ತೇವೆ" ಎಂದು ಹೇಳಿದೆ.
ನಮ್ಮ ಸಂಸ್ಥೆಯು ಈ ಪ್ರಕರಣದ ಕುರಿತು ತನಿಖೆ ನಡೆಸಿದ್ದು, ಏರ್ ಬ್ಯಾಗ್ ಕಾರ್ಯಾಚರಣೆಯಲ್ಲಿ ಯಾವುದೇ ತಪ್ಪಾಗದಿರುವುದು ಕಂಡು ಬಂದಿದೆ. ಇದು ಮುಗಿದು ಹೋಗಿರುವ ಪ್ರಕರಣವಾಗಿದ್ದು, ಕಾರಿನ ಮುಂಭಾಗದಲ್ಲಿ ಯಾವುದೇ ಏರ್ ಬ್ಯಾಗ್ ಅನ್ನು ನಿಯೋಜಿಸಲಾಗಿರಲಿಲ್ಲ ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಸ್ಪಷ್ಟಪಡಿಸಿದೆ.