ಪ್ರಿಯತಮೆಯ ವೇಷದಲ್ಲಿ ಪರೀಕ್ಷೆ ಬರೆಯಲು ಬಂದು ಸಿಕ್ಕಿ ಬಿದ್ದ ಯುವಕ
Photo credit: thequint.com
ಹೊಸದಿಲ್ಲಿ: ಪಂಜಾಬ್ ಫರೀದ್ಕೋಟ್ ನ ಕೋಟ್ಕಪುರದ ಕೇಂದ್ರವೊಂದರಲ್ಲಿ ಜನವರಿ 7 ರಂದು ನಡೆದ ಮಲ್ಟಿ-ಪರ್ಪಸ್ ಆರೋಗ್ಯ ಕಾರ್ಯಕರ್ತರ ನೇಮಕಾತಿ ಪರೀಕ್ಷೆಗಾಗಿ ತನ್ನ ಪ್ರಿಯತಮೆಯ ವೇಷ ಧರಿಸಿ ಆಕೆಯ ಪರ ಪರೀಕ್ಷೆ ಬರೆಯಲು ಆಗಮಿಸಿ ಯುವಕನೊಬ್ಬ ಪೇಚಿಗೀಡಾದ ವಿದ್ಯಮಾನ ನಡೆದಿದೆ.
ಬಾಬಾ ಫರೀದ್ಕೋಟ್ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸಸ್ ನಡೆಸಿದ ಪರೀಕ್ಷೆ ಕೋಟ್ಕಪುರದ ಡಿಎವಿ ಪಬ್ಲಿಕ್ ಸ್ಕೂಲಿನಲ್ಲಿ ಪಡೆದಿತ್ತು. ತನ್ನ ಪ್ರಿಯತಮೆ ಪರಂಜೀತ್ ಕೌರ್ ಗೆ ಸಹಾಯ ಮಾಡಲೆಂದು ಆಕೆಯ ವೇಷ ಧರಿಸಿ ಫಝಿಲ್ಕಾ ಎಂಬಲ್ಲಿನ ಅಂಗ್ರೇಜ್ ಸಿಂಗ್ ಪರೀಕ್ಷಾ ಕೇಂದ್ರಕ್ಕೆ ಮಹಿಳೆಯರು ಉಡುಪು, ಕೆಂಪು ಬಳೆ, ಬಿಂದಿ, ಲಿಪ್ಸ್ಟಿಕ್ ಧರಿಸಿ ಬಂದಿದ್ದ. ತಾನು ಪರಂಜೀತ್ ಕೌರ್ ಎಂದು ತೋರಿಸಿಕೊಳ್ಳಲು ನಕಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಅನ್ನು ತಯಾರಿಸಿದ್ದ. ಇನ್ನೇನು ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಸಿಕ್ಕಿತೆಂಬಷ್ಟರಲ್ಲಿ ಬಯೋಮೆಟ್ರಿಕ್ ಸಾಧನದಲ್ಲಿ ಬೆರಳಚ್ಚು ತಾಳೆಯಾಗದೇ ಇದ್ದಾಗ ಆತ ಸಿಕ್ಕಿ ಬಿದ್ದಿದ್ದ.
ಘಟನೆಯ ನಂತರ ಪರಂಜೀತ್ ಕೌರ್ ಅರ್ಜಿಯನ್ನು ತಿರಸ್ಕರಿಸಲಾಯಿತು ಹಾಗೂ ಅಂಗ್ರೇಜ್ ಸಿಂಗ್ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆಡಳಿತ ಮುಂದಾಗಿದೆ.