ಜಮ್ಮು| ವಾಮಾಚಾರದ ಶಂಕೆಯಲ್ಲಿ ದೇವಾಲಯ ಧ್ವಂಸ: ಆರೋಪಿ ಅರ್ಜುನ್ ಶರ್ಮ ಬಂಧನ
Photo credit: india.com
ಜಮ್ಮು: ವಾಮಾಚಾರ ನಡೆಸಲಾಗುತ್ತಿದೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆ ಜಮ್ಮುವಿನ ನಗ್ರೋತಾದ ನಾರಾಯಣ್ ಖೂ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಘಟನೆ ನಡೆದ ಬೆನ್ನಿಗೇ ಪೊಲೀಸರು ಅರ್ಜುನ್ ಶರ್ಮ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಈ ಘಟನೆಗೆ ಯಾವುದೇ ರಾಜಕೀಯ ಆಯಮವಿಲ್ಲ. ಅರ್ಜುನ್ ಶರ್ಮ ಅಲ್ಲಿ ವಾಮಾಚಾರ ನಡೆಯುತ್ತಿದೆ ಎಂಬ ಶಂಕೆಯಿಂದ ಆತ ಶನಿವಾರ ನಗ್ರೋತಾದಲ್ಲಿರುವ ದೇವಾಲಯಕ್ಕೆ ಬೆಂಕಿ ಹಚ್ಚಿ, ಗರ್ಭಗುಡಿಯನ್ನು ಧ್ವಂಸಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ ಆರಂಭದಲ್ಲಿ ಪೊಲೀಸರು ಆತನ ಗುರುತನ್ನು ಬಹಿರಂಗ ಪಡಿಸಿರಲಿಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಲಪಂಥೀಯರು ಈ ಕೃತ್ಯಕ್ಕೆ ಕೋಮು ಆಯಾಮ ನೀಡಿದ್ದರು. ಆದರೆ, ಅಂತಿಮವಾಗಿ ಪೊಲೀಸರು ಆರೋಪಿಯ ಗುರುತನ್ನು ಬಹಿರಂಗ ಪಡಿಸಿದ್ದಾರೆ.
Next Story