ಮಣಿಪುರ | ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಶಪಡಿಸಿಕೊಂಡ ಭದ್ರತಾ ಪಡೆ
PC : PTI
ಇಂಫಾಲ : ಮಣಿಪುರದ ಕಕ್ಚಿಂಗ್ ಹಾಗೂ ಥೌಬಾಲ್ ಜಿಲ್ಲೆಗಳಲ್ಲಿ ನಡೆದ ಶೋಧ ಕಾರ್ಯಾಚರಣೆ ಸಂದರ್ಭ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಹಾಗೂ ಸ್ಫೋಟಕಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಪೊಲೀಸರು ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭದ್ರತಾ ಪಡೆ ಅಕ್ಟೋಬರ್ 5ರಂದು ಕಕ್ಚಿಂಗ್ ಜಿಲ್ಲೆಯ ವಾಬಾಗೈ ನಾಟೆಖೋಂಗ್ ತುರೇನ್ಮೇಯಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ಕೂಡ ಮ್ಯಾಗಝಿನ್ನೊಂದಿಗೆ 3 ಕಾರ್ಬೈನ್ಗಳು, 1 ಏರ್ ಗನ್ ರೈಫಲ್ ಹಾಗೂ 9 ಎಂಎಂ ಪಿಸ್ತೂಲ್, 2 ಸಿಂಗಲ್ ಬ್ಯಾರಲ್ ಗನ್, ಡಿಟೋನೇಟರ್ ಇಲ್ಲದ 14 ಗ್ರೆನೇಡ್ಗಳು, ಒಂದು 51 ಎಂಎಂ ಮೋರ್ಟರ್, 2 ಎಂಕೆ-3 ಗ್ರೆನೇಡ್, 4.755 ಕಿ.ಗ್ರಾ. ತೂಕದ ಐಇಡಿಯನ್ನೊಳಗೊಂಡ ಶಂಕಿತ ಕಂಟೈನರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಥೌಬಾಲ್ ಜಿಲ್ಲಿಯ ಚಿಂಗ್ಖಾಮ್ ಚಿಂಗ್ ಪ್ರದೇಶದಲ್ಲಿ ಶನಿವಾರ ನಡೆಸಿದ ಇನ್ನೊಂದು ಕಾರ್ಯಾಚರಣೆಯ ಸಂದರ್ಭ ಭದ್ರತಾ ಪಡೆಗಳು ಮ್ಯಾಗಝಿನ್ನೊಂದಿಗೆ ಎಸ್ಎಂಜಿ ಕಾರ್ಬೈನ್ ಹಾಗೂ .32 ಪಿಸ್ತೂಲ್ನೊಂದಿಗೆ ಎಸ್ಎಸ್ಬಿಎಲ್ ಅನ್ನು ವಶಪಡಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಶೋಧ ಕಾರ್ಯಾಚರಣೆ ಸಂದರ್ಭ ಒಂದು 81 ಎಂಎಂ ಮೋರ್ಟರ್ ಶೆಲ್, 4 ಕೈ ಬಾಂಬು, 3 ಡಿಟೋನೇಟರ್, 45 ಸಜೀವ ಸ್ಪೋಟಕ, 5 ಹಸಿರು ಗ್ರೆನೇಡ್, 7 ಟಿಯರ್ ಸ್ಮೋಕ್ ಗ್ರೆನೇಡ್, 11 ಟಿಯರ್ ಸ್ಮೋಕ್ ಶೆಲ್, 2 ಸ್ಟನ್ ಶೆಲ್ ಹಾಗೂ ಇತರ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.